ಪದಾರ್ಥಗಳು:
ಬಟಾಟಿ 200 ಗ್ರಾಂ
ಸಾಬೂದಾನಿ 200 ಗ್ರಾಂ
ಬ್ರೆಡ್ 4 ಹೋಳು
ಹಸಿಮೆಣಸಿನಕಾಯಿ ಅಗತ್ಯವಿದ್ದಷ್ಟು
ಖಾರದ ಪುಡಿ ಅಗತ್ಯವಿದ್ದಷ್ಟು
ಇಂಗು
ಉಪ್ಪು ರುಚಿಗೆ
ತುಪ್ಪ
ಅದ್ರಕ
ನಿಂಬೇಹಣ್ಣು
ವಿಧಾನ:
ಸಾಬೂದಾನಿಯನ್ನು ಒಂದು ಗಂಟೆ ಮುಂಚೆ ನೆನೆಯಲು ಇಡಿ. ಬಟಾಟೆಯನ್ನು ಕುದಿಸಿ ತೆಗೆಯಿರಿ, ಅನಂತರ ಅದರ ಸಿಪ್ಪೆ ತೆಗೆದು, ಸಣ್ಣ ಪುಡಿ ಮಾಡಿ. ಬ್ರೆಡ್ಡನ್ನು ತುಂಡು ಮಾಡಿ ಬಟಾಟೆಯಲ್ಲಿ ಕೂಡಿಸಿ. ನೆಂದ ಸಾಬೂದಾನಿಯನ್ನೂ ಬಟಾಟೆಯಲ್ಲಿ ಕೂಡಿಸಿ. ಅದಕ್ಕೆ ಹೆಚ್ಚಿದ ಹಸಿಮೆಣಸಿನಕಾಯಿ, ಅದ್ರಕ, ಉಪ್ಪು, ಖಾರದ ಪುಡಿ, ಇಂಗು, ನಿಂಬೇ ರಸ, ಕಾಯ್ದ ತುಪ್ಪ ಹಾಕಿ ಹಿಟ್ಟನ್ನು ನಾದಿ. ಒಂದು ಗಂಟೆ ನಂತರ ಹಿಟ್ಟಿನ ಉಂಡೆಗಳನ್ನು ಮಾಡಿ ಎಣ್ಣೆಯಲ್ಲಿ ಕರಿಯಬೇಕು.