ಬೇಕಾಗುವ ಪದಾರ್ಥ: ಶೇಂಗಾ 1 ಬಟ್ಟಲು, ಬೆಲ್ಲ 1 ಬಟ್ಟಲು, ಗೋಧಿಹಿಟ್ಟು 1 ಬಟ್ಟಲು, ಏಲಕ್ಕಿ ಪುಡಿ ಸ್ವಲ್ಪ, ಎಣ್ಣೆ.
ಮಾಡುವ ವಿಧಾನ: ಶೇಂಗಾ ಅಥವಾ ನೆಲಕಡಲೆಯನ್ನು ಹುರಿದುಕೊಂಡು ಸಿಪ್ಪೆಯನ್ನು ತೆಗೆದಿಡಿ. ಇದನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿ. ನಂತರ ಬೆಲ್ಲವನ್ನು ತುರಿದು ಪುಡಿ ಮಾಡಿ ಶೇಂಗಾ ಪುಡಿಯ ಜೊತೆಗೆ ಸೇರಿಸಿ. ಬೇಕಾದರೆ ಮಿಕ್ಸಿಯಲ್ಲೇ ಇವನ್ನು ತಿರುವಿ ಹೂರಣ ತಯಾರಿಸಿಕೊಳ್ಳಿ. ನಂತರ ಗೋಧಿ ಹಿಟ್ಟಿಗೆ ನೀರನ್ನು ಬೆರೆಸಿ ಚಪಾತಿ ಮಾಡುವ ಕಣಕದಂತೆ ತಯಾರಿಸಿಟ್ಟುಕೊಳ್ಳಿ. ಮೊದಲೇ ತಯಾರಿಸಿದ ಹೂರಣವನ್ನು ಸಣ್ಣ ಸಣ್ಣ ಉಂಡೆ ಮಾಡಿಕೊಂಡು ಅದನ್ನು ಗೋಧಿಹಿಟ್ಟಿನ ಕಣದಿಂದ ಪೂರ್ತಿ ಮುಚ್ಚಿ ಲಟ್ಟಿಸಿ. ಲಟ್ಟಿಸಿದ ಶೇಂಗಾ ಹೋಳಿಗೆಯ ಎರಡೂ ಬದಿಗೆ ಎಣ್ಣೆಯನ್ನು ಸವರಿ ಕಂದುಬಣ್ಣ ಬರುವವರೆಗೆ ಬೇಯಿಸಿರಿ.