ಬೇಕಾಗುವ ಸಾಮಗ್ರಿ- ಅರ್ಧ ಕಪ್ ಮೈದಾ ಹಿಟ್ಟು, ಅರ್ಧ ಕಪ್ ತುಪ್ಪ, ಒಂದು ಕಪ್ ಸಕ್ಕರೆ, ಒಂದು ಕಪ್ ಶುಂಠಿ ರಸ, ಕಾಲು ಕಪ್ ಖೋವಾ.
ಮಾಡುವ ವಿಧಾನ- ಬಾಣಲೆಯನ್ನು ಒಲೆಯಲ್ಲಿಟ್ಟು ತುಪ್ಪ ಹಾಕಿ ಬಿಸಿಯಾದಾಗ ಮೈದಾ ಹಿಟ್ಟು ಹಾಕಿ ಪರಿಮಳ ಬರುವ ತನಕ ಕೆಂಪಗೆ ಹುರಿಯಿರಿ. ಶುಂಠಿ ಚೆನ್ನಾಗಿ ತೊಳೆದು ಸಿಪ್ಪೆ ತೆಗೆದು ತುರಿದು ರುಬ್ಬಿ. ಸಕ್ಕರೆಗೆ ಕೊಂಚ ನೀರು ಸೇರಿಸಿ ಒಲೆಯ ಮೇಲಿಟ್ಟು ಸಕ್ಕರೆ ಪಾಕ ಮಾಡಿ. ಸಕ್ಕರೆ ಪಾಕವಾದ ಮೇಲೆ ರುಬ್ಬಿದ ಶುಠಿ ರಸ ಹಾಕಿ ಸ್ವಲ್ಪ ತಿರುವಿ ಅದಕ್ಕೆ ಹುರಿದ ಮೈದಾ ಹಿಟ್ಟು ಮತ್ತು ಖೋವಾ ಹಾಕಿ ತಿರುವಿ. ಬಾಣಲೆಯಿಂದ ಬದಿ ಬಿಡುತ್ತಾ ಬಂದ ಮೇಲೆ ಒಲೆಯಿಂದ ಕೆಳಗಿಳಿಸಿ, ತುಪ್ಪ ಸವರಿದ ತಟ್ಟೆಯಲ್ಲಿ ಹರವಿ. ತಣಿದ ಮೇಲೆ ಬೇಕಾದ ಆಕಾರಕ್ಕೆ ಕತ್ತರಿಸಿ.