ಬೇಕಾಗುವ ಸಾಮಗ್ರಿ- ಕಂಡೆ್ಸ್ಡ್ ಮಿಲ್ಕ್, ಅರ್ಧ ಚಮಚ ತುಪ್ಪ, ಗೋಡಂಬಿ ಹಾಗೂ ಒಣದ್ರಾಕ್ಷಿ, ಒಂದು ಲೀಟರ್ ಹಾಲು.
ಮಾಡುವ ವಿಧಾನ- ವರ್ಮಿಸಿಲ್ಲಿಯನ್ನು ತುಪ್ಪದಲ್ಲಿ ಹೊಂಬಣ್ಣ ಬರುವವೆಗೆ ಹುರಿದು ಪಕ್ಕದಲ್ಲಿಡಿ. ಪಾತ್ರೆಯಲ್ಲಿ ಸ್ವಲ್ಪ ಕಂಡೆನ್ಸ್ಡ್ ಮಿಲ್ಕ್ ತಗೆದುಕೊಂಡು ಅದಕ್ಕೆ ನೀರು ಸೇರಿಸಿ ಸ್ವಲ್ಪ ತೆಳುವಾಗಿಸಿ. ನಂತರ ಇದಕ್ಕೆ ಹಾಲು ಸೇರಿಸಿ ಕುದಿಯಲು ಇಡಿ. ಹಾಲು ಕುದಿಯಲು ಶುರುವಾದಾಗ ಇದಕ್ಕೆ ವರ್ಮಿಸಿಲ್ಲಿ ಸೇರಿಸಿ ತಿರುವುತ್ತಾ ಇರಿ. ಸರಿಯಾಗಿ ಬೆಂದ ಮೇಲೆ, ಗೋಡಂಬಿ ಹಾಗೂ ಓಣದ್ರಾಕ್ಷಿಯನ್ನು ಹುರಿದು ಸೇರಿಸಿ. ಫ್ರಿಡ್ಜ್ನಲ್ಲಿಟ್ಟು ತಣ್ಣಗಾದ ಮೇಲೆ ತಿನ್ನಲು ಕೊಡಿ.