Article Sweets Recipes In Kannada %e0%b2%b5%e0%b2%b0%e0%b3%8d%e0%b2%ae%e0%b2%bf%e0%b2%b8%e0%b2%bf%e0%b2%b2%e0%b3%8d%e0%b2%b2%e0%b2%bf %e0%b2%aa%e0%b2%be%e0%b2%af%e0%b2%b8 109100300080_1.htm

Daily Horoscope

Select Your Language

Notifications

webdunia
webdunia
webdunia
webdunia

ವರ್ಮಿಸಿಲ್ಲಿ ಪಾಯಸ

ವರ್ಮಿಸಿಲ್ಲಿ ಪಾಯಸ
ಬೇಕಾಗುವ ಸಾಮಗ್ರಿ- ಒಂದು ಲೀಟರ್ ಹಾಲು, ಸಕ್ಕರೆ 250 ಗ್ರಾಂ, ಏಲಕ್ಕಿ ಪುಡಿ ಸ್ವಲ್ಪ, ಕೇಸರಿ ಸ್ವಲ್ಪ, ಎಂಟು ಚಮಚ ತುಪ್ಪ, 15- 20 ಗೋಡಂಬಿ.

ಮಾಡುವ ವಿಧಾನ- ವರ್ಮಿಸಿಲ್ಲಿಯನ್ನು ನಾಲ್ಕು ಚಮಚ ತುಪ್ಪದಲ್ಲಿ ಹುರಿಯಿರಿ. ಇದು ಚಿನ್ನದ ಕಂದು ಬಣ್ಣ ತಲುಪಿದ ತಕ್ಷಣ ಕೆಳಗಿಳಿಸಿ. ಹಾಲು ಕಾಯಿಸಲು ಇಡಿ. ಇದು ಕುದಿಯಲು ಶುರುವಾದ ತಕ್ಷಣ ಇದಕ್ಕೆ ಹುರಿದ ವರ್ಮಿಸಿಲ್ಲಿಯನ್ನು ಹಾಕಿ. ಚೆನ್ನಾಗಿ ಕುದಿಯಲು ಬಿಡಿ. ವರ್ಮಿಸಿಲ್ಲಿ ಬೆಂದ ನಂತರ ಇದಕ್ಕೆ ಸಕ್ಕರೆ ಸೇರಿಸಿ. ಚೆನ್ನಾಡಿ ಕರಗಲು ಬಿಡಿ. ನಂತರ ಕೇಸರಿ ಏಲಕ್ಕಿ ಪುಡಿ ಸೇರಿಸಿ. ಸ್ವಲ್ಪ ಹೊತ್ತು ಹಾಗೆಯೇ ಬಿಸಿ ಮಾಡುತ್ತಾ ಇರಿ. ಮಿಶ್ರಣ ದಪ್ಪವಾದ ಮೇಲೆ ತುಪ್ಪದಲ್ಲಿ ಹುರಿದ ಗೋಡಂಬಿ ಸೇರಿಸಿ. ಬಿಸಿಯಾಗಿ ಅಥವಾ ತಣ್ಣಗೆ ತಿನ್ನಲು ಕೊಡಿ.

Share this Story:

Follow Webdunia kannada