ಬೇಕಾಗುವ ಸಾಮಗ್ರಿ- ಮೈದಾಹಿಟ್ಟು ಒಂದು ಬಟ್ಟಲು, ತುಪ್ಪ ಅರ್ಧ ಬಟ್ಟಲು, ಸಕ್ಕರೆ ಪುಡಿ ಅರ್ಧ ಬಟ್ಟಲು, ಬಾದಾಮಿ ಪುಡಿ ಕಾಲು ಬಟ್ಟಲು, ಲವಂಗ ಪುಡಿ ಅರ್ಧ ಚಮಚ, ಲವಂಗ 20, ಕರಿಯಲು ಎಣ್ಣೆ, ಬಣ್ಣ ಆರೆಂಜ್ ಕಲರ್.
ಮಾಡುವ ವಿಧಾನ- ಮೈದಾ ಹಿಟ್ಟಿಗೆ ಕಾಯಿಸಿಟ್ಟ ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಸ್ವಲ್ಪ ನೀರು ಹಾಕಿ ಲವಂಗ ಪುಡಿ ಸೇರಿಸಿ. ಪುಟ್ಟ ಉಂಡೆಗಳನ್ನಾಗಿ ಮಾಡಿ ಪೂರಿಯಂತೆ ಲಟ್ಟಿಸಿ ಎರಡೂ ಬದಿಗಳನ್ನು ಮಧ್ಯಕ್ಕೆ ಮಡಚಿ ನಾಲ್ಕೂ ಕಡೆ ಲವಂಗ ಚುಚ್ಚಿ ಕಾದ ಎಮ್ಣೆಗೆ ಹಾಕಿ ಕರಿಯಿರಿ. ಸಕ್ಕರೆಗೆ ಸ್ವಲ್ಪ ಕೇಸರಿ ಸೇರಿಸಿ ಚೆನ್ನಾಗಿ ಕುದಿಸಿ ಪಾಕ ಮಾಡಿಡಿ. ಆ ಪಾಕಕ್ಕೆ ಕರಿದಿಟ್ಟ ಲಕೋಟೆಗಳನ್ನು ಮುಳುಗಿಸಿ ತಟ್ಟೆಯಲ್ಲಿಟ್ಟು ಅದರ ಮೇಲೆ ಬಾದಾಮಿ ಪುಡಿ ಉದುರಿಸಿದರತೆ ರುಚಿಯಾದ ಲವಂಗ ಲಕೋಟೆ ಸಿದ್ಧ.