ಬೇಕಾಗುವ ಸಾಮಗ್ರಿ: ಒಂದುವರೆ ಕಪ್ ಗೋಧಿಹಿಟ್ಟು, ಕಾಲು ಕಪ್ ಕೊಬ್ಬರಿ ತುರಿ, ಎರಡು ಚಮಚ ಹುರಿದ ಎಳ್ಳು, ಮುಕ್ಕಾಲು ಕಪ್ ತುರಿದ ಬೆಲ್ಲ, ಮೂರು ಚಮಚ ತುಪ್ಪ, ಕರಿಯಲು ಎಣ್ಣೆ, ಗಸಗಸೆ.
ಮಾಡುವ ವಿಧಾನ: ಗೋಧಿಹಿಟ್ಟನ್ನು ನೀರಿನಲ್ಲಿ ಪೂರಿಹಿಟ್ಟಿನ ಹದಕ್ಕೆ ಕಲಸಿ ತುಸು ದಪ್ಪಗೆ ಪೂರಿಗಳಂತೆ ಲಟ್ಟಿಸಿ, ತುಪ್ಪ ಅಥವಾ ಎಣ್ಣೆಯಲ್ಲಿ ಗರಿಗರಿಯಾಗಿ ಕರಿದು ತೆಗೆಯಿರಿ. ತಣಿದ ಬಳಿಕ ಇವನ್ನು ಪುಡಿಮಾಡಿಕೊಳ್ಳಿ. ಒಂದು ಚಮಚ ತುಪ್ಪ ಬಿಸಿ ಮಾಡಿ ಕೊಬ್ಬರಿ ತುರಿ, ಗಸಗಸೆಯನ್ನುಎರಡು ನಿಮಿಷ ಹುರಿದು ತೆಗೆಯಿರಿ. ಬೆಲ್ಲಕ್ಕೆ ಒಂದು ಚಮಚ ತುಪ್ಪ, ಒಂದು ಚಮಚ ನೀರು ಸೇರಿಸಿ ಮಂದ ಉರಿಯಲ್ಲಿ ಒಲೆ ಮೇಲಿಡಿ. ಬೆಲ್ಲ ಕರಗಿದ ಮೇಲೆ ಪುಡಿ ಮಾಡಿಟ್ಟ ಪೂರಿ ಪುಡಿ, ಕೊಬ್ಬರಿ, ಎಳ್ಳು ಸೇರಿಸಿ ಬೆರೆಸಿ. ನಂತರ ಕೆಳಗಿಳಿಸಿ ತಣಿಯಲು ಬಿಡಿ ಪೂರ್ತಿ ತಣಿಯುವ ಮೊದಲೇ ಕೈಗೆ ತುಪ್ಪ ಹಚ್ಚಿ ಲಿಂಬೇಗಾತ್ರದ ಲಡ್ಡು ಕಟ್ಟಿ ತಿನ್ನಲು ಭಾರೀ ರುಚಿಯಾಗಿರುತ್ತದೆ.