ಬೇಕಾಗುವ ಪದಾರ್ಥಗಳು :
ರಾಗಿ 1 ಕಪ್ಪು
ಸಕ್ಕರೆ 1 ಕಪ್ಪು
ಹಾಲು 1 ಕಪ್ಪು
ನೀರು 1 ಕಪ್ಪು
ಏಲಕ್ಕಿ
ತುಪ್ಪ
ವಿಧಾನ :
ರಾಗಿಯನ್ನು ರಾತ್ರಿ ನೀರಿನಲ್ಲಿ ನೆನೆಯಿಡಬೇಕು. ಬೆಳಿಗ್ಗೆ ಅದಕ್ಕೆ ಒಂದು ಕಪ್ ನೀರು ಹಾಕಿ ಗಂಧದಂತೆ ರುಬ್ಬಬೇಕು. ಅನಂತರ ಬಟ್ಟೆಯಿಂದ ಅದನ್ನು ಸೋಸಬೇಕು. ಸೋಸಿದ ರಾಗಿ ಹಿಟ್ಟಿನಲ್ಲಿ ಸಕ್ಕರೆ, ಹಾಲು, ತುಪ್ಪ ಹಾಕಿ ಸಣ್ಣ ಉರಿಯ ಮೇಲೆ ಕುದಿಸಬೇಕು. ಈ ಮಿಶ್ರಣ ಗಟ್ಟಿಯಾದೊಡನೆ ತುಪ್ಪ ಸವರಿದ ತಟ್ಟೆಗೆ ಹಾಕಿಕೊಳ್ಳಬೇಕು. ಅನಂತರ ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಬಹುದು.