ಬೇಕಾಗುವ ಸಾಮಾಗ್ರಿಗಳು:
ರಾಗಿ -1 ಕಪ್
ಸಕ್ಕರೆ - 1 ಕಪ್
ಹಾಲು - 1 ಕಪ್
ನೀರು - 1 ಕಪ್
ಏಲಕ್ಕಿ - ಸ್ವಲ್ಪ
ತುಪ್ಪ - ಸ್ವಲ್ಪ
ಪಾಕ ವಿಧಾನ
ರಾಗಿಯನ್ನು ರಾತ್ರಿ ನೀರಿನಲ್ಲಿ ನೆನೆದಿಟ್ಟು ಬೆಳಿಗ್ಗೆ ಅದಕ್ಕೆ ಒಂದು ಕಪ್ ನೀರು ಹಾಕಿ ನಯವಾಗಿ ರುಬ್ಬಿ
ಅನಂತರ ಒಂದು ಬಟ್ಟೆಯಿಂದ ಅದನ್ನು ಸೋಸಿ. ಸೋಸಿದ ರಾಗಿ ಹಿಟ್ಟಿನಲ್ಲಿ ಸಕ್ಕರೆ, ಹಾಲು, ತುಪ್ಪ ಹಾಕಿ ಸಣ್ಣ ಉರಿಯ ಮೇಲೆ ಕುದಿಸಿ.
ಈ ಮಿಶ್ರಣ ಗಟ್ಟಿಯಾದೊಡನೆ ತುಪ್ಪ ಸವರಿದ ತಟ್ಟೆಗೆ ಹಾಕಿಕೊಂಡು ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಿ.