ಬೇಕಾಗುವ ಸಾಮಾಗ್ರಿಗಳು:
ಮೈದಾಹಿಟ್ಟು - 1 ಕಪ್
ಮೊಸರು - 1 ಕಪ್
ನೀರುಳ್ಳಿ - 2
ಕರಿಬೇವಿನ ಸೊಪ್ಪು
ಹಸಿಮೆಣಸಿನಕಾಯಿ 4-5
ತೆಂಗಿನತುರಿ - ಅರ್ಧ ಕಪ್
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ
ಪಾಕ ವಿಧಾನ:
ನೀರು ಸೇರಿಸದೆ ಮೈದಾ ಮತ್ತು ಮೊಸರು ಸೇರಿಸಿ ಪೇಸ್ಟ್ ತಯಾರಿಸಿ. ಇದಕ್ಕೆ ನೀರುಳ್ಳಿ ಬಿಟ್ಟು ಬೇರೆಲ್ಲಾ ಸಾಮಾಗ್ರಿಗಳನ್ನು ಸೇರಿಸಿ. ಇದನ್ನು 5-6 ಗಂಟೆ ಹಾಗೇ ಬಿಡಿ. ನಂತರ ಇದಕ್ಕೆ ಸಣ್ಣಗೆ ಹೆಚ್ಚಿದ ನೀರುಳ್ಳಿ ಸೇರಿಸಿ. ಎಣ್ಣೆಯಲ್ಲಿ ಕರಿಯಿರಿ.