Article Sweets Recipes In Kannada %e0%b2%ae%e0%b3%88%e0%b2%a6%e0%b2%be %e0%b2%95%e0%b2%9c%e0%b3%8d%e0%b2%9c%e0%b2%be%e0%b2%af 110033100067_1.htm

Select Your Language

Notifications

webdunia
webdunia
webdunia
webdunia

ಮೈದಾ ಕಜ್ಜಾಯ

ಸಿಹಿತಿಂಡಿ
ಬೇಕಾಗುವ ಸಾಮಗ್ರಿ: ಒಂದು ಕಪ್ ಮೈದಾ, ಕಾಲು ಕಪ್ ರವೆ, ಸ್ವಲ್ಪ ಉಪ್ಪು, ಕರಿಯಲು ಎಣ್ಣೆ, ಸ್ವಲ್ಪ ಗೋಡಂಬಿ, ಕರ್ಬೂಜ ಹಣ್ಣಿನ ಬೀಜ, ಏಲಕ್ಕಿ.
ಮಾಡುವ ವಿಧಾನ: ಮೈದಾ, ರವೆ, ಉಪ್ಪಿಗೆ ನೀರು ಸೇರಿಸಿ ಗಟ್ಟಿಯಾದ ಹಿಟ್ಟನ್ನು ತಯಾರಿಸಿ. ಇದನ್ನು ಒದ್ದೆ ಬಟ್ಟೆಯಿಂದ 1/2 ಗಂಟೆ ಮುಚ್ಚಿಡಿ. ಹಿಟ್ಟನ್ನು ಮೃದುವಾಗಿ ಚೆನ್ನಾಗಿ ನಾದಿ. ಗೋಡಂಬಿ ಹಾಗೂ ಕರ್ಬೂಜ ಹಣ್ಣಿನ ಬೀಜಗಳನ್ನು ಒಂದು ಗಂಟೆ ಬಿಸಿಲಿನಲ್ಲಿ ಒಣಗಿಸಿ ಪ್ರತ್ಯೇಕವಾಗಿ ಪುಡಿ ಮಾಡಿ, ಸಕ್ಕರೆ ಹಾಗೂ ಏಲಕ್ಕಿ ಪುಡಿಗಳೊಂದಿಗೆ ಬೆರೆಸಿ. ಮೈದಾ ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿ ಅವುಗಳನ್ನು ತೆಳುವಾದ ಚಪಾತಿಗಳಂತೆ ಲಟ್ಟಿಸಿ. ಇದನ್ನು ಎಣ್ಣೆ ಸವರಿದ ಸಮೋಸಾ ಎರಕದ ಅಚ್ಚಿನ ಮೇಲೆ ಹಾಕಿ. ಇದರ ಮೇಲೆ ಕರ್ಬೂಜ ಹಾಗೂ ಗೋಡಂಬಿ ಬೀಜದ ಮಿಶ್ರಣವನ್ನು ಸ್ವಲ್ಪ ಹರಡಿ. ಅಂಚುಗಳನ್ನು ಅಂಟಿಸಿ. ಅಚ್ಚಿಲ್ಲದಿದ್ದರೆ ಚಪಾತಿಯಂತೆ ಲಟ್ಟಿಸಿದ ಮೇಲೆ ಅದರೊಳಗೆ ಮಿಶ್ರಣ ತುಂಬಿ ಸಮೋಸಾ ಆಕಾರದಲ್ಲಿ ಕೈಯಿಂದಲೇ ಅಂಚು ಸೇರಿಸಿಯೂ ಮಾಡಬಹುದು. ನಂತರ ಎಣ್ಣೆಯಲ್ಲಿ ಗರಿಗರಿಯಾಗಿ ಕರಿಯಿರಿ.

Share this Story:

Follow Webdunia kannada