ಬೇಕಾಗುವ ಸಾಮಗ್ರಿ: ಸಾದಾ ಪಡ್ಡಿನ ಹಿಟ್ಟು, 2 ಆಲೂಗಡ್ಡೆ, 2 ಹಸಿ ಮೆಣಸಿನಕಾಯಿ, 2 ಈರುಳ್ಳಿ ,ಉದ್ದಿನಬೇಳೆ, ಕಡಲೆ ಬೇಳೆ, ಒಂದು ಚಮಚ ಸಾಸುವೆ, ಉಪ್ಪು, ಎಣ್ಣೆ.
ಮಾಡುವ ವಿಧಾನ: ಆಲೂಗೆಡ್ಡೆಯನ್ನು ಬೇಯಿಸಿ ಸಿಪ್ಪೆ ತೆಗೆದು ಪುಡಿ ಮಾಡಿಟ್ಟುಕೊಳ್ಳಿ. ಕಾದ ಬಾಣಲೆಗೆ ಎಣ್ಣೆ ಹಾಕಿ, ಕಾದ ನಂತರ ಸಾಸಿವೆ ಹಾಕಿ. ನಂತರ ಉದ್ದಿನಬೇಳೆ, ಕಡಲೆ ಬೇಳೆ, ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ. ಪುಡಿ ಮಾಡಿದ ಆಲೂಗೆಡ್ಡೆ ಮತ್ತು ಉಪ್ಪನ್ನು ಹಾಕಿ. ಸ್ವಲ್ಪ ನಿಂಬೆರಸ, ಕೊತ್ತುಂಬರಿ ಸೊಪ್ಪಿನೊಂದಿಗೆ ಬೆರೆಸಿ. ಇದನ್ನು ಪಡ್ಡಿನ ಹಿಟ್ಟಿಗೆ ಬೆರಸಿ ಕಾದ ಪಡ್ಡಿನ ಹೆಂಚಿನ ಮೇಲೆ ಹಾಕಿ, ಎರಡೂ ಕಡೆ ಬೇಯಿಸಿ. ಪುದೀನ ಚಟ್ನಿಯೊಂದಿಗೆ ಸವಿಯಲು ಕೊಡಿ.