Article Sweets Recipes In Kannada %e0%b2%ae%e0%b2%a7%e0%b3%81 %e0%b2%aa%e0%b3%81%e0%b2%b7%e0%b3%8d%e0%b2%aa 110041700032_1.htm

Select Your Language

Notifications

webdunia
webdunia
webdunia
webdunia

ಮಧು ಪುಷ್ಪ

ಸಿಹಿತಿಂಡಿ
ಬೇಕಾಗುವ ಸಾಮಗ್ರಿ- 300 ಗ್ರಾಂ ಮೈದಾ ಹಿಟ್ಟು, ಒಂದು ಕಪ್ ಬಿಸಿ ಹಾಲು, ಒಂದು ಕಪ್ ಸಕ್ಕರೆ, ಎರಡು ಚಮಚ ತುಪ್ಪ, ಒಂದು ಚಮಚ ಏಲಕ್ಕಿ ಪುಡಿ, ಒಂದೆರಡು ಹನಿ ವೆನಿಲಾ ಎಸೆನ್ಸ್, ಕರಿಯಲು ಎಣ್ಣೆ.

ಮಾಡುವ ವಿಧಾನ- ಜರಡಿ ಹಿಡಿದ ಮೈದಾ ಹಿಟ್ಟಿಗೆ ಕೊಂಚ ಉಪ್ಪು ಸೇರಿಸಿ. ಸ್ವಲ್ಪ ತುಪ್ಪ ಬೆರೆಸಿ. ಹಾಲಿಗೆ ಏಲಕ್ಕಿ ಹಾಗೂ ಸಕ್ಕರೆ ಹಾಕಿ ಚೆನ್ನಾಗಿ ಕಲಸಿ. ಮೈದಾ ಹಿಟ್ಟಿಗೆ ಈ ಹಾಲನ್ನು ಸೇರಿಸಿ ಚೆನ್ನಾಗಿ ನಾದಿ. ಸ್ವಲ್ಪ ಹೊತ್ತು ಈ ಕಲಸಿದ ಹಿಟ್ಟನ್ನು ಹಾಗೇ ಇಟ್ಟು ನಂತರ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ. ಕೆಲವು ಉಂಡೆಗಳ ಆಕಾರ ದೊಡ್ಡದಿರಲಿ. ಈ ಉಂಡೆಗಳನ್ನು ಪೂರಿಯ ಹಾಗೆ ಲಟ್ಟಿಸಿಕೊಳ್ಳಿ. ಹಟ್ಟಿಸಿದ ದೊಡ್ಡ ಪೂರಿಯನ್ನು ಅಡಿಯಲ್ಲಿಟ್ಟು ಅದರ ಮೇಲೆ ಮತ್ತೆ ಸ್ವಲ್ಪ ಸಣ್ಣದನ್ನು ಇಡಿ. ಹೀಗೆ ನಾಲ್ಕಾರು ಪೂರಿಗಳನ್ನು ಸೈಜಿಗೆ ತಕ್ಕಂತೆ ಒಂದರ ಮೇಲೊಂದು ಇಟ್ಟು ನಡುವಿನ ಮಧ್ಯದಲ್ಲಿ ಬೆರಳಿನಿಂದ ಒತ್ತಿ. ಆಗ ಪೂರಿಗಳು ಒಂದರ ಮೇಲೊಂದು ಅಂಟಿಕೊಳ್ಳುತ್ತದೆ. ಆಮೇಲೆ ಇದನ್ನು ನಕ್ಷತ್ರಾಕಾರದಲ್ಲಿ ಒಟ್ಟಿಗೆ ಕತ್ತರಿಸಿ. ಕತ್ತರಿಸಿದ ಪುಷ್ಪವನ್ನು ಹೊಂಬಣ್ಣ ಬರುವವರೆಗೂ ಕರಿಯಿರಿ.

Share this Story:

Follow Webdunia kannada