ಬೇಕಾಗುವ ಸಾಮಾಗ್ರಿಗಳು- ಬ್ರೆಡ್ ಸ್ಲೈಸ್‌ಗಳು - 7, ಹಾಲು - ಅರ್ಧ ಲೀಟರ್, ತುಪ್ಪ - ಕಾಲು ಕಪ್,
ಸಕ್ಕರೆ - ಮುಕ್ಕಾಲು ಕಪ್, ಪಿಸ್ತಾ, ಗೋಡಂಬಿ ಮತ್ತು ಬಾದಾಮಿ- ಸ್ವಲ್ಪ.
ಮಾಡುವ ವಿಧಾನ: ಬ್ರೆಡ್ ಸ್ಲೈಸ್‌ಗಳ ಗಟ್ಟಿಯಾದ ಅಂಚುಗಳನ್ನು ತೆಗೆದು, ಇದನ್ನು ಚೌಕಾಕಾರದ ತುಂಡುಗಳಾಗಿ ಕತ್ತರಿಸಿ. ಈ ಕತ್ತರಿಸಿದ ಬ್ರೆಡ್ ಸ್ಲೈಸ್‌ಗಳನ್ನು ಎರಡೂ ಕಡೆ ಹೊಂಬಣ್ಣ ಬರುವವರೆಗೆ ತುಪ್ಪದಲ್ಲಿ ಬೇಯಿಸಿ, ಅರ್ಧ ಗಂಟೆ ಹಾಲಿನಲ್ಲಿ ನೆನೆ ಹಾಕಿ. ಒಲೆಯ ಮೇಲೆ ಬಾಣಲೆ ಇಟ್ಟು ಅದರಲ್ಲಿ ನೆನೆಹಾಕಿದ ಸ್ಲೈಸ್‌ಗಳು ಮತ್ತು ಸಕ್ಕರೆ ಹಾಕಿ ಹಲ್ವಾ ಹದಕ್ಕೆ ಬರುವವರೆಗೆ ಕಲಸುತ್ತಿರಿ. ಕೊನೆಯಲ್ಲಿ ತುಪ್ಪ, ಬಾದಾಮಿ,ಗೋಡಂಬಿ ಹಾಗೂ ಪಿಸ್ತಾ ಚೂರುಗಳನ್ನು ಸೇರಿಸಿ ಒಲೆಯಿಂದ ಕೆಳಗಿಳಿಸಿ.