ಬೇಕಾಗುವ ಸಾಮಗ್ರಿ: ಎರಡು ಕಪ್ ಗೋಧಿ ಹಿಟ್ಟು, ಎರಡು ಕಪ್ ತುಪ್ಪ, ಒಂದು ಕಪ್ ಬೆಲ್ಲ, ಏಲಕ್ಕಿ ಪುಡಿ.
ಮಾಡುವ ವಿಧಾನ: ಮೊದಲು ಗೋಧಿ ಹಿಟ್ಟನ್ನು ಸ್ವಲ್ಪ ತುಪ್ಪ ಹಾಕಿ ಅದು ಕಂದುಬಣ್ಣಕ್ಕೆ ತಿರುಗುವವರೆಗೆ ಚೆನ್ನಾಗಿ ಹುರಿದುಕೊಳ್ಳಿ. ತುರಿದ ಬೆಲ್ಲ ಮತ್ತು ತುಪ್ಪವನ್ನು ಹುರಿದ ಹಿಟ್ಟು ಬಿಸಿಯಾಗಿರುವಾಗಲೇ ಚೆನ್ನಾಗಿ ಮಿಕ್ಸ್ ಮಾಡಿ. ತುಪ್ಪ ಜಾಸ್ತಿಯಿದ್ದಷ್ಟೂ ಉತ್ತಮ. ಇದಕ್ಕೆ ಏಲಕ್ಕಿ ಪುಡಿಯನ್ನೂ ಸ್ವಲ್ಪ ಪ್ರಮಾಣದಲ್ಲಿ ಬೆರೆಸಿ ಉಂಡೆ ಮಾಡಿ ತಿನ್ನಬಹುದು. ತುಪ್ಪ ಜಾಸ್ತಿಯಿದ್ದರೆ ಉಂಡೆ ಮಾಡುವುದು ಸುಲಭ.