ಬೇಕಾಗುವ ಸಾಮಾಗ್ರಿಗಳು- ಬಾಳೆಹಣ್ಣು - 12, ಅಕ್ಕಿ ಹಿಟ್ಟು - 1 ಕಪ್, ಮೈದಾ - ಅರ್ಧ ಕಪ್, ಅರಶಿನ ಹುಡಿ - ಕಾಲು ಚಮಚ, ಎಣ್ಣೆ - ಅರ್ಧ ಲೀಟರ್, ಸಕ್ಕರೆ - 3 ಚಮಚ, ಉಪ್ಪು - ರುಚಿಗೆ ತಕ್ಕಷ್ಟು
ಮಾಡುವ ವಿಧಾನ- ಬಾಳೆಹಣ್ಣನ್ನು ದುಂಡಗೆ ಕತ್ತರಿಸಿಕೊಳ್ಳಿ. ಅಕ್ಕಿಹಿಟ್ಟು, ಮೈದಾ, ಅರಶಿನ ಪುಡಿ, ಸಕ್ಕರೆಗೆ ನೀರು ಬೆರೆಸಿ ಹಿಟ್ಟು ಮಾಡಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದು ಕಾದ ನಂತರ ತುಂಡುಮಾಡಿದ ಬಾಳೆಹಣ್ಣನ್ನು ಹಿಟ್ಟಿಗೆ ಮುಳುಗಿಸಿ ಎಣ್ಣೆಯಲ್ಲಿ ಕಂದುಬಣ್ಣ ಬರುವವರೆಗೆ ಕರಿಯಿರಿ.