ಬೇಕಾಗುವ ಸಾಮಗ್ರಿ- ಎರಡು ಬಾಳೆಹಣ್ಣು, ಕಸ್ಟರ್ಡ್ ಪೌಡರ್, 1 ಆಪಲ್, 150 ಎಂಎಲ್ ಹಾಲು, ಕಾಲು ಕಪ್ ಸಕ್ಕರೆ, ಒಂದು ಚಮಚ ಬಾದಾಮಿ ತುಂಡುಗಳು, ಒಂದು ಚಮಚ ಗೊಂಡಂಬಿ ಚೂರುಗಳು, 1 ಚಮಚ ಪಿಸ್ತಾ ಚೂರುಗಳು, 1 ಚಮಚ ಒಣ ದ್ರಾಕ್ಷಿ ಚೂರುಗಳು, ವೆನಿಲ್ಲಾ ಎಸೆನ್ಸ್ ಕೆಲವು ಬಿಂದುಗಳು.ಮಾಡುವ ವಿಧಾನ- ಸಕ್ಕರೆ ಹಾಗೂ ಕಸ್ಟರ್ಡ್ ಪುಡಿಯನ್ನು ಸ್ವಲ್ಪ ಹಾಲಿನೊಂದಿಗೆ ಸೇರಿಸಿ ಕಲಸಿ. ಇನ್ನುಳಿದ ಸ್ವಲ್ಪ ಹಾಲನ್ನು ಬಿಸಿ ಮಾಡಿ ಅದಕ್ಕೆ ಕಲಸಿಟ್ಟ ಈ ಮಿಶ್ರಣವ್ನನು ಸೇರಿಸಿ. ಕುದಿಯಲು ಆರಂಭವಾಗುವವರೆಗೆ ಇದನ್ನು ಬಿಸಿಮಾಡಿ. ವೆನಿಲ್ಲಾ ಎಸೆನ್ಸ್ ಹಾಕಿ. ಬಾಳೆಹಣ್ಣು ಹಾಗೂ ಆಪಲ್ಗಳನ್ನು ಸಣ್ಣದಾಗಿ ಕತ್ತರಿಸಿ ಮಿಶ್ರಣಕ್ಕೆ ಹಾಕಿ. ಒಣದ್ರಾಕ್ಷಿ, ಗೋಡಂಬಿ, ಪಿಸ್ತಾ, ಬಾದಾಮಿಯಿಂದ ಅಲಂಕರಿಸಿ