ಬೇಕಾಗುವ ಸಾಮಾಗ್ರಿಗಳು: ಮೈದಾಹಿಟ್ಟು, ಸಕ್ಕರೆ, ತುಪ್ಪ, ಅಡಿಗೆ ಸೋಡಾ, ಮೊಸರು,
ಪಾಕ ವಿಧಾನ: ಒಲೆಯಲ್ಲಿ ಪಾತ್ರೆ ಇಟ್ಟು ಸಕ್ಕರೆ ಮತ್ತು ಒಂದು ಲೀಟರ್ ನೀರು ಹಾಕಿಕೊಂಡು ಪಾಕ ಮಾಡಿಕೊಳ್ಳಿ. ಇದು ಜಾಸ್ತಿ ನೀರಾಗದಂತೆ ನೋಡಿಕೊಳ್ಳಿ. ಮೈದಾಹಿಟ್ಟಿಗೆ ಸೋಡಾ, ತುಪ್ಪ ಮತ್ತು ಮೊಸರನ್ನು ಹಾಕಿ ಗಟ್ಟಿಯಾಗಿ ಕಲಸಿ. ಈ ಕಲಸಿದ ಹಿಟ್ಟಿನಿಂದ ಉಂಡೆಗಳನ್ನು ಮಾಡಿ ಆ ಉಂಡೆಗಳನ್ನು ಒಂದೊಂದಾಗಿ ತುಪ್ಪದಲ್ಲಿ ಕರಿದು, ಪಾಕದಲ್ಲಿ ನೆನೆಹಾಕಿರಿ. ಚೆನ್ನಾಗಿ ನೆನೆದ ಬಳಿಕ ಪಾಕದಿಂದ ತೆಗೆದು ಒಂದು ತಟ್ಟೆಗೆ ಹಾಕಿರಿ. ಬಾದೂಷಾ ತಿನ್ನಲು ಸಿದ್ಧ.