ಬೇಕಾಗುವ ಸಾಮಗ್ರಿ- ಬಾದಾಮಿ 1 ಕಪ್, ಎರಡುವರೆ ಕಪ್ ಸಕ್ಕರೆ, 2 ಕಪ್ ತುಪ್ಪ, ಕೇಸರಿ.
ಮಾಡುವ ವಿಧಾನ- ಮೊದಲ ದಿನ ರಾತ್ರಿಯೇ ಕುದಿಯುವ ನೀರಿನಲ್ಲಿ ಒಂದು ಕಪ್ ಬಾದಾಮಿಯನ್ನು ನೆನೆ ಹಾಕಿಡಿ. ಮಾರನೇ ದಿನ ಬೆಳಿಗ್ಗೆ ಬಾದಾಮಿಯ ಚರ್ಮ ಸುಲಿದು, ಚೆನ್ನಾಗಿ ಪೇಸ್ಟ್‌ನಂತೆ ರುಬ್ಬಿ. ಸಕ್ಕರೆ ಪಾಕವನ್ನು ಮಾಡಿ ಅದು ಕುದಿಯುತ್ತಿರುವಾಗಲೇ ಅದಕ್ಕೆ ಬಾದಾಮಿ ಪೇಸ್ಟನ್ನು ಹಾಕಿ. ಚೆನ್ನಾಗಿ ತಿರುವಿ. ಸ್ವಲ್ಪ ನೀರಿನಲ್ಲಿ ಕೇಸರಿ ಪುಡಿ ಕಲಸಿ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ತಿರುವಿ. ಕೂಡಲೇ ಒಂದು ಕಪ್ ತುಪ್ಪ ಸೇರಿಸಿ. ಈ ಮಿಶ್ರಣ ವನ್ನು ತಿರುವುತ್ತಲೇ ಇರಿ. ಹಾಗೂ ಅದು ಪೇಸ್ಟಿನಂತಾಗಲು ಆರಂಭವಾಗುವಾಗ ಅದಕ್ಕೆ ಉಳಿದ ಒಂದು ಕಪ್ ತುಪ್ಪವನ್ನೂ ಸ್ವಲ್ಪ ಸ್ವಲ್ಪವೇ ಸೇರಿಸುತ್ತಾ ಬನ್ನಿ. ಮಿಶ್ರಣ ಸ್ವಲ್ಪ ಗಟ್ಟಿಯಾದ ತಕ್ಷಣ ಅದನ್ನು ಒಲೆಯಿಂದ ಕೆಳಗಿಳಿಸಿ. ಬಿಸಿಯಾಗಿಯೇ ತಿನ್ನಲು ಕೊಡಿ ಅಥವಾ ಫ್ರಿಡ್ಜ್‌ನಲ್ಲಿಟ್ಟು ತಂಪಾಗಿ ತಿನ್ನಲು ಕೊಡಿ.