ಬೇಕಾಗುವ ಪದಾರ್ಥಗಳು :
ಗೋಧಿ 12 ಕೆ ಜಿ
ಹಾಲು ಅರ್ಧ ಲೀಟರ್
ತುಪ್ಪ ಪಾವು ಕೆ ಜಿ
ಸಕ್ಕರೆ ಮುಕ್ಕಾಲು ಕೆ ಜಿ
ಬೇಯಿಸಿದ ಬಾದಾಮಿ ಪುಡಿ ಪಾವು ಕೆ ಜಿ
ಬಾದಾಮಿ 15-20
ಕೇಸರಿ
ಏಲಕ್ಕಿ
ಗೋಡಂಬಿ
ಜಾಜಿಕಾಯಿ ಪುಡಿ
ವಿಧಾನ :
ಗೋಧಿಯನ್ನು ಸ್ವಚ್ಛ ಮಾಡಿಕೊಂಡು ಮೂರು ದಿನ ನೆನೆಹಾಕಿ(ದಿನವೂ ನೀರನ್ನು ಬದಲಿಸುತ್ತಿರಬೇಕು).ಕೇಸರಿ ದಳವನ್ನು ಎರಡು ಚಮಚ ಬಿಸಿ ಹಾಲಿನಲ್ಲಿ 10 ನಿಮಿಷ ನೆನೆಸಿ ಅರೆಯಿರಿ. ಗೋಧಿಯನ್ನು ಬಸಿ ಹಾಕಿ ರುಬ್ಬಿ ಅದನ್ನು ಬಟ್ಟೆಯಲ್ಲಿ ಶೋಧಿಸಿ. ಅದಕ್ಕೆ ತುಸು ಬಿಸಿ ನೀರು ಬೆರೆಸಿ ನಂತರ ಗೋಧಿಯಿಂದ ಬಂದ ಹಾಲನ್ನು 12 ಗಂಟೆಗಳ ಕಾಲ ಇಡಿ. ಮರುದಿನ ಹಾಲಿನ ಮೇಲೆ ತೇಲುತ್ತಿರುವ ನೀರನ್ನು ಬಗ್ಗಿಸಿ ಮಿಶ್ರಣವನ್ನು ಬಟ್ಟೆಯಲ್ಲಿ ಕಟ್ಟಿ ಗೂಟಕ್ಕೆ ನೇತು ಹಾಕಿ. ಆಗ ಅದರಲ್ಲಿರುವ ಮಿಕ್ಕ ನೀರು ಸೋರಿ ಹೋಗುತ್ತದೆ. ಪಾತ್ರೆಯಲ್ಲಿ ಹಾಲು ಸಕ್ಕರೆ ಬೆರೆಸಿ ಗಟ್ಟಿ ಪಾಕ ಮಾಡಿ ಅದಕ್ಕೆ ಗೋಧಿ ಹಾಲಿನ ಮಿಶ್ರಣ ಹಾಕಿ ಸಣ್ಣ ಉರಿಯಲ್ಲಿ ಕೆದುಕುತ್ತ ಬೇಯಿಸಿ. ಅದು ಗಟ್ಟಿಯಾದಾಗ ಬಾದಾಮಿ ಪುಡಿ, ತುಪ್ಪ ಹಾಕಿ. ಅದು ಹೀರಿದಾಗ ಏಲಕ್ಕಿ, ಜಾಜೀಕಾಯಿ ಪುಡಿ ಹಾಕಿ ತುಪ್ಪ ಸವರಿದ ತಟ್ಟೆಗೆ ಹಾಕಿ ಮೇಲೆ ಗೋಡಂಬಿ ಉದುರಿಸಿ.