Article Sweets Recipes In Kannada %e0%b2%ac%e0%b2%be%e0%b2%a6%e0%b2%be%e0%b2%ae%e0%b2%bf %e0%b2%96%e0%b3%80%e0%b2%b0%e0%b3%81 109062700031_1.htm

Select Your Language

Notifications

webdunia
webdunia
webdunia
webdunia

ಬಾದಾಮಿ ಖೀರು

ಸಿಹಿತಿಂಡಿ
ಬೇಕಾಗುವ ಸಾಮಗ್ರಿ- 35 ಬಾದಾಮಿ, ಹಾಲು ಒಂದು ಲೀಟರ್, 20 ಗೋಡಂಬಿ, 20 ಪಿಸ್ತಾ, ಸ್ವಲ್ಪ ಏಲಕ್ಕಿ ಪುಡಿ, 100 ಗ್ರಾಂ ಸಕ್ಕರೆ, ಕೇಸರಿ, 5 ಚಮಚ ತುಪ್ಪ.

ಮಾಡುವ ವಿಧಾನ- ಬಾದಾಮಿಯನ್ನು ಆರೇಳುಗಂಟೆ ನೆನೆ ಹಾಕಿ ಕಂದುಬಣ್ಣದ ಚರ್ಮವನ್ನು ಸುಲಿದು ತೆಗೆಯಿರಿ. ಗೋಡಂಬಿ ಹಾಗೂ ಬಾದಾಮಿಯ ಪೇಸ್ಟ್ ಮಾಡಿ. ಪಾತ್ರೆಯಲ್ಲಿ ಹಾಲು ತೆಗೆದುಕೊಂಡು ಕುದಿಸಿ. ಇನ್ನೊಂದು ಪಾತ್ರೆಯಲ್ಲಿ ತುಪ್ಪ ತೆಗೆದುಕೊಂಡು ಅದರಲ್ಲಿ ಬಾದಾಮಿ ಗೋಡಂಬಿ ಪೇಸ್ಟನ್ನು ಸ್ವಲ್ಪ ಫ್ರೈ ಮಾಡಿ. ಕಂದುಬಣ್ಣ ಬರುವವರೆಗೆ ಫ್ರೈ ಮಾಡುವುದು ಬೇಡ. ಸ್ವಲ್ಪ ತಣ್ಣಗಾದ ಮೇಲೆ ಬಿಸಿ ಮಾಡಿದ ಹಾಲನ್ನು ಹಾಕಿ. ಸಕ್ಕರೆಯ್ನನೂ ಸೇರಿಸಿ. ಚೆನ್ನಾಗಿ ಕರಗಿಸಿ. ನಂತಚರ ಸ್ವಲ್ಪ ಏಲಕ್ಕಿ ಪುಡಿ ಹಾಕಿ. ಇನ್ನೂ ಒಂದೈದು ನಿಮಿಷ ಚೆನ್ನಾಗಿ ಕಲಸಿ. ತಣ್ಣಗಾಗಲು ಬಿಡಿ. ಫ್ರಿಡ್ಜ್‌ನಲ್ಲಿ ತಣ್ಣಗಾದ ಮೇಲೆ ಕೇಸರಿ ದಳಗಳನ್ನು ಉದುರಿಸಿ ಕುಡಿಯಲು ಕೊಡಿ.

Share this Story:

Follow Webdunia kannada