ಬೇಕಾಗುವ ಸಾಮಗ್ರಿ- ಏಲಕ್ಕಿ ಬಾಳೆಹಣ್ಣು ನಾಲ್ಕು, ಕಾರ್ನ್ ಫ್ಲೋರ್ 2 ಚಮಚ, ಮೈದಾ ಹಿಟ್ಟು 2 ಚಮಚ, ಕಡಲೆ ಹಿಟ್ಟು 6 ಚಮಚ, ಸೋಂಪು ಕಾಳು ಅರ್ಧ ಚಮಚ, ಓಂ ಕಾಳು ಅರ್ಧ ಚಮಚ, ಕೆಂಪು ಮೆಣಸಿನ ಹುಡಿ ಎರಡು ಚಮಚ, ಉಪ್ಪು ಸ್ವಲ್ಪ, ಎಣ್ಣೆ ಕರಿಯಲು, ಚಿಟಿಕೆಯಷ್ಟು ಸೋಡಾ.
ಮಾಡುವ ವಿಧಾನ- ಹಿಟ್ಟುಗಳನ್ನು ಜರಡಿಯಾಡಿಸಿ. ಇದಕ್ಕೆ ಉಪ್ಪು, ಓಂ ಕಾಳು, ಮೆಣಸಿನ ಪುಡಿ, ಸೋಂಪು, ಸೋಡಾ ಸೇರಿಸಿ. ನೀರು ಹಾಕಿ ಬೋಂಡಾ ಹದಕ್ಕೆ ಕಲಸಿ. ಬಾಳೆ ಹಣ್ಣಿನ ಸಿಪ್ಪೆ ತೆಗೆದು ಉದ್ದನಾಗಿ ಬೆರಳಿನಾಕಾರಕ್ಕೆ ಕತ್ತರಿಸಿ. ಕಲಸಿದ ಹಿಟ್ಟಿನಲ್ಲಿ ಅದ್ದಿ ಕಾದ ಎಣ್ಣೆಗೆ ಹಾಕಿ ಹೊಂಬಣ್ಣ ಬರುವವರೆಗೂ ಕರಿಯಿರಿ. ಈಗ ಬನಾನಾ ಫಿಂಗರ್ಸ್ ರೆಡಿ.