ಬೇಕಾಗುವ ಸಾಮಾಗ್ರಿಗಳು:
ಬಾಳೆಹಣ್ಣು - 2
ಸೇಬು - 1
ಕಸ್ಟರ್ಡ್ ಪೌಡರ್ - 15 ಗ್ರಾಂ
ಹಾಲು - 150 ಮಿ.ಲೀ.
ಸಕ್ಕರೆ - ಕಾಲು ಕಪ್
ಗೋಡಂಬಿ ಚೂರುಗಳು - 1 ಚಮಚ
ಬಾದಾಮಿ ಚೂರುಗಳು - 1 ಚಮಚ
ಪಿಸ್ತಾ ಚೂರುಗಳು - 1 ಚಮಚ
ಒಣ ದ್ರಾಕ್ಷಿ - 1 ಚಮಚ
ವೆನಿಲ್ಲಾ ಎಸೆನ್ಸ್ - ಸ್ವಲ್ಪ
ಪಾಕ ವಿಧಾನ:
ಸ್ವಲ್ಪ ಹಾಲಿನೊಂದಿಗೆ ಸಕ್ಕರೆ ಮತ್ತು ಕಸ್ಟರ್ಡ್ ಹುಡಿಯನ್ನು ಮಿಶ್ರಮಾಡಿ.ಉಳಿದ ಹಾಲನ್ನು ಬಿಸಿ ಮಾಡಿ, ಈ ಮಿಶ್ರಣಕ್ಕೆ ಹಾಕಿ.ಇದು ಕುದಿಯಲು ಪ್ರಾರಂಭವಾಗುವ ತನಕ ಈ ಮಿಶ್ರಣವನ್ನು ಬಿಸಿ ಮಾಡಿ, ನಂತರ ವೆನಿಲ್ಲಾ ಎಸೆನ್ಸ್ ಸೇರಿಸಿ.
ಬಾಳೆಹಣ್ಣು ಮತ್ತು ಸೇಬು ಹಣ್ಣುಗಳನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ. ಇದಕ್ಕೆ ಸೇರಿಸಿ ಕೊನೆಯಲ್ಲಿ ಬಾದಾಮಿ, ಗೋಡಂಬಿ, ಪಿಸ್ತಾ ಮತ್ತು ದ್ರಾಕ್ಷಿಯಿಂದ ಅಲಂಕರಿಸಿರಿ.