ಬೇಕಾಗುವ ಸಾಮಗ್ರಿ- ಒಂದು ಕಪ್ ಹಾಲಿನ ಪುಡಿ, ಮುಕ್ಕಾಲು ಕಪ್ ಸಕ್ಕರೆ, 75 ಗ್ರಾಂ ಉಪ್ಪು ಹಾಕದ ಬೆಣ್ಣೆ, ಏಲಕ್ಕಿ ಪುಡಿ, ಅಲಂಕರಿಸಲು ಬಾದಾಮಿ ಹಾಗೂ ಪಿಸ್ತಾ.
ಮಾಡುವ ವಿಧಾನ- ಗಟ್ಟಿ ಳದ ಪಾತ್ರೆಗೆ ಮೂರ್ನಾಲ್ಕು ಚಮಚ ನೀರು ಹಾಕಿ. ಅದಕ್ಕೆ ಸಕ್ಕರೆ ಸೇರಿಸಿ ಹದ ಉರಿಯಲ್ಲಿಟ್ಟು ಸಕ್ಕರೆ ಪಾಕವಾಗುವಂತೆ ಮಾಡಿ. ಅದಕ್ಕೆ ಬೆಣ್ಣೆ ಸೇರಿಸಿ ಕರಗಲು ಬಿಡಿ. ನಂತರ ಹಾಲಿನ ಪುಡಿ ಹಾಗೂ ಏಲಕ್ಕಿ ಪುಡಿ ಸೇರಿಸಿ. ಚೆನ್ನಾಗಿ ತಿರುವಿ. ಪಾತ್ರೆಯನ್ನು ಕೆಳಗಿಳಿಸಿ. ಒಂದೆರಡು ಗಂಟೆ ಬಿಟ್ಟ ನಂತರ ಈ ಮಿಶ್ರಣ ಇನ್ನೂ ಹೆಚ್ಚು ಗಟ್ಟಿಯಗಿರುತ್ತದೆ. ಅದನ್ನು ಚೆಂದದ ಉಂಡೆಗಳನ್ನಾಗಿಸಿ ಸ್ವಲ್ಪ ಬಿಸ್ಕಿಟ್ ಆಕಾರಕ್ಕೆ ಒತ್ತಿ. ಬಾದಾಮಿ ಅಥವಾ ಪಿಸ್ತಾ ಚೂರುಗಳಿಂದ ಅಲಂಕರಿಸಿ.