ಬೇಕಾಗುವ ಸಾಮಗ್ರಿ- ಅಕ್ಕಿ 1 ಲೋಟ, ಗೋಧಿ ಅರ್ಧ ಲೋಟ, ಹೆಸರು ಕಾಳು ಅರ್ಧ ಲೋಟ, ಹುರಿಗಡಲೆ ಅರ್ಧ ಲೋಟ, ಹುರಿದ ಕಡಲೇಕಾಯಿ ಬೀಜ ಅರ್ಧ ಲೋಟ, ಹೆಚ್ಚಿದ ಕೊಬ್ಬರಿ ಅರ್ಧ ಲೋಟ, ಮೆಣಸು ಸ್ವಲ್ಪ, ಬೆಲ್ಲ ಸ್ವಲ್ಪ.
ಮಾಡುವ ವಿಧಾನ- ಅಕ್ಕಿಯನ್ನು ತೊಳೆದು ಬಸಿದು ಆರಿದ ಮೇಲೆ ಹುರಿದಿಟ್ಟುಕೊಳ್ಳಿ. ಗೋಧಿ, ಹೆಸರು ಕಾಳನ್ನು ಕೆಂಪಗೆ ಹುರಿದು ಈ ಮೂರಕ್ಕೆ ಸ್ವಲ್ಪ ಹುರಿಗಡಲೆ, ಸ್ವಲ್ಪ ಮೆಣಸು ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ದಪ್ಪ ತಳದ ಬಾಣಲೆಯಲ್ಲಿ ಬೆಲ್ಲ ಹಾಕಿ ಪಾಕ ಮಾಡಿಕೊಂಡುಎಷ್ಟು ಬೇಕೋ ಅಷ್ಟು ಹಿಟ್ಟಿಗೆ ಹುರಿದ ಕಡಲೇಕಾಯಿ ಬೀಜ, ಹುರಿಗಡಲೆ, ಕೊಬ್ಬರಿ ತುರಿ ಎಲ್ಲ ಹಾಕಿ ಮಿಶ್ಱಣ ಮಾಡಿ ಪಾಕ ಹಾಕಿಕೊಂಡು ಉಂಡೆ ಕಟ್ಟಿ. ಪುಳ್ಳಂಗಾಯಿ ಉಂಡೆ ಸಿದ್ಧ.