ಬೇಕಾಗುವ ಪದಾರ್ಥಗಳು:
ತಾಜಾ ಪುದಿನಾ ಸೊಪ್ಪು ಒಂದು ಹಿಡಿ
ಒಂದು ಟೀ ಚಮಚ ಕಾಳು ಮೆಣಸಿನ ಪುಡಿ
ಚಿಟಿಕೆ ಉಪ್ಪು
ಎರಡು ಟೀ ಚಮಚ ನಿಂಬೆರಸ
ಅರ್ಧ ಲೋಟ ನೀರು.
ಮಾಡುವ ವಿಧಾನ:
ಪುದೀನಾ ಎಲೆಗಳನ್ನು ತೊಳೆದು, ಸ್ವಲ್ಪ ನೀರು ಸೇರಿಸಿ ನುಣ್ಣಗೆ ಮಿಕ್ಸ್ ಮಾಡಿ ಮತ್ತೆ ನೀರು ಹಾಕಿ ಸೋಸಿರಿ. ಈಗ ದ್ರಾವಣಕ್ಕೆ ನಿಂಬೆರಸ, ಉಪ್ಪು ಕಾಳು ಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿರಿ. ಸಿದ್ಧಗೊಂಡ ಪುದಿನಾ ಜ್ಯೂಸ್ ಅನ್ನು ಫ್ರಿಜ್ ನಲ್ಲಿ ಸಹ ಇರಿಸಿ ಕುಡಿಯಬಹುದು. ಮಧುಮೇಹಿಗಳಿಗಲ್ಲದೇ ಎಲ್ಲರೂ ಬಳಸಬಹುದಾದ ಔಷಧೀಯ ಗುಣವಿರುವ ಈ ಪುದಿನಾ ಜ್ಯೂಸ್ ರುಚಿಕರವಾದದ್ದೂ ಕೂಡ.