ಬೇಕಾಗುವ ಸಾಮಗ್ರಿ- ಮಾವಿನ ಕಾಯಿ ನಾಲ್ಕು, ಸಕ್ಕರೆ ಎರಡು ಲೋಟ, ಏಲಕ್ಕಿ ಪುಡಿ ಸ್ವಲ್ಪ.
ಮಾಡುವ ವಿಧಾನ- ಮಾವಿನ ಕಾಯಿಯನ್ನು ಸಿಪ್ಪೆ ತೆಗೆದು ತುರಿದಿಡಿ. ನಂತರ ಇದನ್ನು ಹಬೆಯಲ್ಲಿ ನೀರು ಸೇರಿಸದೆ ಬೇಯಿಸಿ. ಇನ್ನೊಂದೆಡೆ ಸಕ್ಕರೆ ಪಾಕ ಮಾಡಿಟ್ಟು ತಣಿಯಲು ಬಿಡಿ. ನಂತರ ಆ ಸಕ್ಕರೆ ಪಾಕಕ್ಕೆ ಹಬೆಯಲ್ಲಿ ಬೇಯಿಸಿದ ತುರಿಯನ್ನು ಹಾಕಿ. ಬೇಕಿದ್ದರೆ ಸ್ವಲ್ಪ ಏಲಕ್ಕಿ ಪುಡಿ ಸೇರಿಸಿ. ಪನ್ನಾ ರೆಡಿ. ತಣಿದ ಮೇಲೆ ಇದನ್ನು ಜಾಡಿಯಲ್ಲಿ ಹಾಕಿ ಫ್ರಿಡ್ಜ್‌ನಲ್ಲಿ ಶೇಖರಿಸಿಡಿ. ಅಗತ್ಯವಿದ್ದಾಗ ಚಮಚದಷ್ಟು ಪನ್ನಾ ತೆಗೆದು ಮಿಕ್ಸಿಯಲ್ಲಿ ಹಾಕಿ ಐಸ್ ಕ್ಯೂಬ್ ಜೊತೆಗೆ ತಿರುಗಿಸಿ. ತಂಪಾದ ಪನ್ನಾ ಜ್ಯೂಸ್ ಸಿದ್ಧ.