ಬೇಕಾಗುವ ಸಾಮಗ್ರಿ- ಸೀಡ್ ಲೆಸ್ ಕಪ್ಪು ದ್ರಾಕ್ಷಿ, ಸಕ್ಕರೆ, ನೀರು.
ಮಾಡುವ ವಿಧಾನ- ದ್ರಾಕ್ಷಿ ಹಣ್ಣನ್ನು ಹಣ್ಣನ್ನು ಗೊಂಚಲಿನಿಂದ ಬಿಡಿಬಿಡಿಯಾಗಿ ಬಿಡಿಸಿ. ಚೆನ್ನಾಗಿ ನೀಡಿನಿಂದ ತೊಳೆಯಿರಿ. ಉಪ್ಪು ನೀರಿನಲ್ಲಿ ಅದ್ದಿ ತೊಳೆದರೆ ಒಳ್ಳೆಯದು. ತೊಳೆದ ದ್ರಾಕ್ಷಿ ಹಣ್ಣು ದೊಡ್ಡದಿದ್ದರೆ ಬೇಕಿದ್ದರೆ ಅರ್ಧ ಭಾಗ ಮಾಡಿಕೊಳ್ಳಿ. ಮಿಕ್ಸಿಯಲ್ಲಿ ಹಾಕಿ ಸ್ವಲ್ಪ ನೀರು, ಸಕ್ಕರೆ ಸೇರಿಸಿ ಚೆನ್ನಾಗಿ ತಿರುಗಿಸಿ. ಬೇಕಾದಷ್ಟು ನೀರು ಸೇರಿಸಿ ಮತ್ತೊಮ್ಮೆ ತಿರುಗಿಸಿ. ತಂಪಾದ ಜ್ಯೂಸ್ ಸಿದ್ಧ.