ಬೇಕಾಗುವ ಸಾಮಾಗ್ರಿಗಳು:
ಹೆಸರು ಬೇಳೆ - 1 ಕಪ್
ಸಕ್ಕರೆ - 1 ಕಪ್
ತುಪ್ಪ - 1 ಕಪ್
ದಪ್ಪ ಹಾಲು - 2 ಕಪ್
ಬೇಸನ್ - 1 ದೊಡ್ಡ ಚಮಚ
ನೀರು - 1 ಕಪ್
ಬಾದಾಮಿ
ಗೋಡಂಬಿ
ಕೇಸರಿ ಬಣ್ಣ
ಪಾಕ ವಿಧಾನ :
ಬೇಳೆಯನ್ನು 4-5ಗಂಟೆ ನೆನೆಸಿಟ್ಟು ನಂತರ ಚೆನ್ನಾಗಿ ರುಬ್ಬಿರಿ.ಸಕ್ಕರೆಯ ಪಾಕ ಮಾಡಿ ಅದಕ್ಕೆ ಕೇಸರಿ ಬಣ್ಣವನ್ನು ಸೇರಿಸಿರಿ. ಒಂದು ಪಾತ್ರೆಯಲ್ಲಿ ತುಪ್ಪವನ್ನು ಬಿಸಿ ಮಾಡಿ ಅದಕ್ಕೆ ರುಬ್ಬಿದ ಬೇಳೆಯನ್ನು ಹಾಕಿ. ತುಪ್ಪ ಪೂರ್ಣ ಕರಗಿದ ಮೇಲೆ ದಪ್ಪ ಹಾಲನ್ನು ಹಾಕಿ, ಅದರ ನೀರಿನಂಶವು ಕಡಿಮೆಯಾದಾಗ ಸ್ವಲ್ಪ ಸ್ವಲ್ಪವೇ ಸಕ್ಕರೆಯ ಪಾಕವನ್ನು ಇದಕ್ಕೆ ಹಾಕುತ್ತಾ ಬನ್ನಿ. ನೀರಿನಂಶ ಪೂರ್ತಿ ಕಡಿಮೆಯಾದ ಮೇಲೆ ಬಾದಾಮಿ ಮತ್ತು ಗೋಡಂಬಿಯನ್ನು ಸೇರಿಸಿ.