Article Sweets Recipes In Kannada %e0%b2%a6%e0%b2%ae%e0%b3%8d%e0%b2%b0%e0%b3%82%e0%b2%9f%e0%b3%8d 109111400078_1.htm

Select Your Language

Notifications

webdunia
webdunia
webdunia
webdunia

ದಮ್ರೂಟ್

ಸಿಹಿತಿಂಡಿ
ಬೇಕಾಗುವ ಸಾಮಾಗ್ರಿ: 1 ಕುಂಬಳಕಾಯಿ, ಕಾಲು ಕೆಜಿ ರವೆ, ಒಂದು ಲೋಟ ಸಕ್ಕರೆ, ಒಂದು ಲೋಟ ತುಪ್ಪ, ಎರಡು ಲೋಟ ಗಟ್ಟಿ ಹಾಲು, ಗೋಡಂಬಿ, ಏಲಕ್ಕಿ ಪುಡಿ, ಒಣ ದ್ರಾಕ್ಷಿ.

ಮಾಡುವ ವಿಧಾನ: ಕುಂಬಳಕಾಯಿಯ ಬೀಜ ತೆಗೆದು ಸಣ್ಣಗೆ ತುರಿದಿಟ್ಟುಕೊಳ್ಳಿ. ರವೆಯನ್ನು ಸ್ವಲ್ಪ ತುಪ್ಪದಲ್ಲಿ ಹುರಿದಿಡಿ. ನಂತರ ಪಾತ್ರೆಯಲ್ಲಿ ಕುಂಬಳಕಾಯಿ ತುರಿ ಮತ್ತು ಹಾಲು ಹಾಕಿ ಬೇಯಿಸಿ. ಕುಂಬಳಕಾಯಿ ಮೆತ್ತಗಾದ ನಂತರ ಅದಕ್ಕೆ ತುಪ್ಪ ಸಕ್ಕರೆ ಹಾಕಿ ಹಾಗೇ ಹದ ಉರಿಯಲ್ಲಿಡಿ. ನಂತರ ಹುರಿದ ರವೆಯನ್ನು ಸುರುವಿ ಚೆನ್ನಾಗಿ ತಿರುವುತ್ತಲೇ ಇರಿ. ಬೆಂದ ನಂತರ ಪಾತ್ರೆ ಮುಚ್ಚಿ ಸಣ್ಣ ಉರಿಯಲ್ಲಿ ದಮ್ರೂಟ್ ಹದವಾಗಲು ಬಿಡಿ. ನಂತರ ತುಪ್ಪದಲ್ಲಿ ಹದವಾಗಿ ಹರಿದ ಏಲಕ್ಕಿ ಪುಡಿ ಒಣದ್ರಾಕ್ಷಿ ಮತ್ತು ಗೋಡಂಬಿ ಸೇರಿಸಿ. ಈಗ ದಮ್ರೂಟ್ ಸಿದ್ಧ.

Share this Story:

Follow Webdunia kannada