Article Sweets Recipes In Kannada %e0%b2%a4%e0%b2%b0%e0%b2%95%e0%b2%be%e0%b2%b0%e0%b2%bf %e0%b2%b9%e0%b2%b2%e0%b3%8d%e0%b2%b5%e0%b2%be 109080100105_1.htm

Select Your Language

Notifications

webdunia
webdunia
webdunia
webdunia

ತರಕಾರಿ ಹಲ್ವಾ

ಸಿಹಿತಿಂಡಿ
ಬೇಕಾಗುವ ಸಾಮಗ್ರಿ- ಒಂದು ಕಪ್ ಆಲೂಗಡ್ಡೆ ಚೂರುಗಳು, ಕುಂಬಳಕಾಯಿ ಚೂರುಗಳು ಒಂದು ಕಪ್, ಒಂದು ಕಪ್ ಕ್ಯಾರೆಟ್ ಚೂರು, ಹೆಸರು ಬೇಳೆ ಎರಡು ಕಪ್, ಸಕ್ಕರೆ ಐದು ಕಪ್, ಏಲಕ್ಕಿ ಪುಡಿ ಸ್ವಲ್ಪ, 10 ಗೋಡಂಬಿ, ತುಪ್ಪ ಒಂದು ಕಪ್.

ಮಾಡುವ ವಿಧಾನ- ಎಲ್ಲಾ ತರಕಾರಿಗಳನ್ನು ಸ್ವಲ್ಪ ನೀರು ಹಾಕಿ ಬೇಯಿಸಿ. ನಂತರ ನೀರನ್ನು ತೆಗೆದು ಹಾಕಿ, ಬೇಯಿಸಿದ ತರಕಾರಿಗಳನ್ನು ನಯವಾದ ಪೇಸ್ಟ್ ಆಗುವಂತೆ ರುಬ್ಬಿ. ಹೆಸರು ಬೇಳೆಯ್ನನು ಅದರ ಸುವಾಸನೆ ಬರುವವರೆಗೆ ಫ್ರೈ ಮಾಡಿ. ಈ ಫ್ರೈ ಮಾಡಿದ ಬೇಳೆಯನ್ನು ಒಂದು ಗಂಟೆ ಕಾಲ ನೆನೆಸಿಡಿ. ನಂತರ ನುಣ್ಣಗೆ ಪೇಸ್ಟ್ ಮಾಡಿ. ದಪ್ಪ ತಳದ ಬಾಣಲೆಯಲ್ಲಿ ಸಕ್ಕರೆ, ತುಪ್ಪ, ಹೆಸರುಬೇಳೆ ಪೇಸ್ಟ್ ಹಾಗೂ ತರಕಾರಿ ಪೇಸ್ಟ್ ಮಿಕ್ಸ್ ಮಾಡಿ. ಹಲ್ವಾದಂತೆ ಆಗುವವರೆಗೆ ತಿರುವುತ್ತಾ ಇರಿ. ಇದಕ್ಕೆ ತುಪ್ಪದಲ್ಲಿ ಹುರಿದ ಗೋಡಂಬಿಯನ್ನು ಹಾಗೂ ಏಲಕ್ಕಿ ಪುಡಿ ಸೇರಿಸಿ. ಬಿಸಿಬಿಸಿಯಾಗಿ ಅಥವಾ ತಂಪಾದ ಮೇಲೆ ತಿನ್ನಲು ಕೊಡಿ.

Share this Story:

Follow Webdunia kannada