Article Sweets Recipes In Kannada %e0%b2%a4%e0%b2%82%e0%b2%ac%e0%b2%bf%e0%b2%9f%e0%b3%8d%e0%b2%9f%e0%b3%81 109112800042_1.htm

Select Your Language

Notifications

webdunia
webdunia
webdunia
webdunia

ತಂಬಿಟ್ಟು

ತಂಬಿಟ್ಟು
ಬೇಕಾಗುವ ಸಾಮಗ್ರಿ: ಪುಟಾಣಿ (ಕಡ್ಲೆಪಾಪು), ಎರಡು ಕಪ್ ಬೆಲ್ಲ, ಒಂದು ಬಟ್ಟಲು ತುಪ್ಪ, ಒಂದು ಬಟ್ಟಲು ಒಣ ಕೊಬ್ಬರಿ, ಅರ್ಧ ಬಟ್ಟಲು ಶೇಂಗಾ, ಕಾಲು ಬಟ್ಟಲು ಎಳ್ಳು, ಏಲಕ್ಕಿ ಪುಡಿ.

ಮಾಡುವ ವಿಧಾನ: ಮೊದಲು ಪುಟಾಣಿಯನ್ನು ಮಿಕ್ಸಿಯಲ್ಲಿ ಸಣ್ಣಗೆ ಪುಡಿ ಮಾಡಿ. ಅದಕ್ಕೆ ಚೆನ್ನಾಗಿ ಹುರಿದ ಶೇಂಗಾ, ಎಳ್ಳು, ಏಲಕ್ಕಿ ಪುಡಿ ಬೆರೆಸಿ. ನಂತರ ಬಾಣಲೆಗೆ ತುಪ್ಪ ಸುರಿದು ಅದಕ್ಕೆ ಬೆಲ್ಲವನ್ನು ಸೇರಿಸಿ ನಿರಂತರವಾಗಿ ಕೈಯಾಡಿಸುತ್ತಲೇ ಇರಿ. ಬೆಲ್ಲ ತುಪ್ಪದೊಡನೆ ಚೆನ್ನಾಗಿ ಬೆರೆತು ಅದು ಕುದಿ ಬಂದ ನಂತರ ಗಟ್ಟಿಯಾಗುವ ಮೊದಲೇ ಕೆಳಕ್ಕಿಳಿಸಿ. ಬೆಲ್ಲದ ಪಾಕ ತುಸು ಆರಿದ ನಂತರ ಪುಟಾಣಿ ಮತ್ತಿತರ ಪದಾರ್ಥಗಳ ಮಿಶ್ರಣಕ್ಕೆ ಸ್ವಲ್ಪ ಸ್ವಲ್ಪವೇ ಬೆಲ್ಲದ ಪಾಕ ಸೇರಿಸುತ್ತಾ ಉಂಡೆ ಕಟ್ಟಿ. ಈ ಉಂಡೆ ಎಲ್ಲ ಉಂಡೆಗಳಂತಲ್ಲ. ಉಂಡೆಯನ್ನು ಉರುಟಾಗಿ ಮಾಡಿದ ನಂತರ ಅದರ ಮೇಲ್ಭಾಗ ಹಾಗೂ ಕೆಳಭಾಗ ತಟ್ಟಿ ಸ್ವಲ್ಪ ಚಪ್ಪಟೆಯಾಗಿಸಬೇಕು. ಈಗ ತಂಬಿಟ್ಟು ರೆಡಿ.

Share this Story:

Follow Webdunia kannada