Article Sweets Recipes In Kannada %e0%b2%9f%e0%b2%bf%e0%b2%b2%e0%b3%8d %e0%b2%ac%e0%b2%b0%e0%b3%8d%e0%b2%ab%e0%b2%bf 109082200070_1.htm

Select Your Language

Notifications

webdunia
webdunia
webdunia
webdunia

ಟಿಲ್ ಬರ್ಫಿ

ಸಿಹಿತಿಂಡಿ
ಬೇಕಾಗುವ ಸಾಮಗ್ರಿ- ಮೂರು ಕಪ್ ಎಳ್ಳು, ಒಂದು ಕಪ್ ನೆಲಗಡಲೆ, ಎರಡುವರೆ ಕಪ್ ಸಕ್ಕರೆ, ಅರ್ಧ ಕಪ್ ತುರಿದ ಒಣಕೊಬ್ಬರಿ.

ಮಾಡುವ ವಿಧಾನ- ಎಳ್ಳನ್ನು ಸ್ವಲ್ಪ ಪರಿಮಳ ಬರುವವರೆಗೆ ಹುರಿಯಿರಿ. ನೆಲಗಡಲೆಯನ್ನು ಪ್ರತ್ಯೇಕವಾಗಿ ಹುರಿಯಿರಿ. ಹುರಿದ ಎಳ್ಳ್ನು ತುಂಬ ನಯವಾಗದಂತೆ ಸ್ವಲ್ಪ ರುಬ್ಬಿ. ಹುರಿದ ನೆಲಗಡಲೆಯನ್ನು ಚೆನ್ನಾಗಿ ನಯವಾಗುವಂತೆ ರುಬ್ಬಿ. ನಂತರ ಎರಡನ್ನೂ ಮಿಕ್ಸ್ ಮಾಡಿ. ದಪ್ಪ ತಳದ ಪಾತ್ರೆಯಲ್ಲಿ ದಪ್ಪ ಸಕ್ಕರೆ ಪಾಕವನ್ನು ಮಾಡಿ. ರುಬ್ಬಿದ ಎಳ್ಳು ಹಾಗೂ ನೆಲಗಡಲೆಯ ಮಿಶ್ರಣವನ್ನು ಸಕ್ಕರೆ ಪಾಕಕ್ಕೆ ಸೇರಿಸಿ. ತಳಹಿಡಿಯದ ಹಾಗೆ ಚೆನ್ನಾಗಿ ತಿರುವುತ್ತಾ ಇರಿ. ದಪ್ಪವಾದ ತಕ್ಷಣ ಒಲೆಯಿಂದ ಕೆಳಗಿಳಿಸಿ. ತುಪ್ಪ ಸವರಿದ ತಟ್ಟೆಯಲ್ಲಿ ಇದನ್ನು ಹರವಿ. ತುರಿದ ಒಣಕೊಬ್ಬರಿಯನ್ನು ಇದರ ಮೇಲೆ ಸ್ವಲ್ಪ ಅಲಂಕರಿಸಿ. ಬೇಕಾದ ಆಕಾರಕ್ಕೆ ಕತ್ತರಿಸಿ.

Share this Story:

Follow Webdunia kannada