ಬೇಕಾಗುವ ಸಾಮಗ್ರಿ- ರಿಕೋಟಾ ಚೀಸ್- ಒಂದು ಪ್ಯಾಕ್, ಹಾಲಿನ ಪುಡಿ- ಒಂದು ಪ್ಯಾಕ್, ಸಕ್ಕರೆ ಒಂದು ಕಪ್, ಒಂದು ಚಮಚ ತುಪ್ಪ, ಕತ್ತರಿಸಿದ ಪಿಸ್ತಾ ಎರಡು ಚಮಚ. ಮಾಡುವ ವಿಧಾನ- ಹದ ಉರಿಯಲ್ಲಿ ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ. ರಿಕೋಟಾ ಚೀಸ್ ಸೇರಿಸಿ ತುರುವಿ. ಹಾಲಿನ ಪುಡಿ ಸೇರಿಸಿ. ತಿರುವುತ್ತಾ ಇರಿ. ಈ ಮಿಶ್ರಣ ಸ್ವಲ್ಪ ಗಟ್ಟಿಯಾಗುತ್ತಾ ಬಂದಂತೆ ಸಕ್ಕರೆ ಸೇರಿಸಿ. ಮಿಶ್ರಣ ಪಾತ್ರೆಯಿಂದ ಬೇರೆಯಾಗಿ ಏಳಲು ಶುರುವಾಗುವವರೆಗೆ ತಿರುವುತ್ತಲೇ ಇರಿ. ನಂತರ ಇದನ್ನು ತುಪ್ಪ ಸವರಿದ ಬಟ್ಟಲಿಗೆ ಹಾಕಿ. ಕತ್ತರಿಸಿದ ಪಿಸ್ತಾ ಉದುರಿಸಿ. ತಣ್ಣಗಾಗಲು ಬಿಡಿ. ನಂತರ ಬೇಕಾದ ಆಕಾರಕ್ಕೆ ಕತ್ತರಿಸಿ. ಚೀಸ್ ಬರ್ಫಿ ರೆಡಿ.