ಬೇಕಾಗುವ ಸಾಮಗ್ರಿಗಳು :
ಬಿಳಿ ಗೋಧಿ 100 ಗ್ರಾಂ
ಸಕ್ಕರೆ 150 ಗ್ರಾಂ
ದ್ರಾಕ್ಷಿ ಅಗತ್ಯವಿದ್ದಷ್ಟು
ಗೋಡಂಬಿ ಅಗತ್ಯವಿದ್ದಷ್ಟು
ತುಪ್ಪ ಸ್ವಲ್ಪ
ಏಲಕ್ಕಿ ಪುಡಿ ಸ್ವಲ್ಪ
ದಳ ಕೇಸರಿ 2 ರಿಂದ 3
ನಿಂಬೆ ಹಣ್ಣು 2
ಕೇಸರಿ ಬಣ್ಣ ಒಂದು ಚಿಟಿಕೆ
ಮಾಡುವ ವಿಧಾನ :
ಗೋಧಿಯನ್ನು ಒಂದು ದಿನ ನೆನೆಯಿಟ್ಟು ಬಸಿದು ತೆಗೆಯಿರಿ. ಅನಂತರ ಅದನ್ನು ನುಣ್ಣಗೆ ರುಬ್ಬಿ, ತೆಳುವಾದ ಬಟ್ಟೆಯಲ್ಲಿ ಅದರ ಹಾಲನ್ನು ಶೋಧಿಸಿ. ಆ ಹಾಲನ್ನು 1 ತಾಸು ಮುಚ್ಚಿಡಿ. ಒಂದು ಪಾತ್ರೆಗೆ ತುಪ್ಪ ಹಾಕಿ ಅದನ್ನು ಒಲೆಯ ಮೇಲಿಡಿ, ಕಾಯ್ದ ಮೇಲೆ ಅದಕ್ಕೆ ದ್ರಾಕ್ಷಿ ಗೋಡಂಬಿ ಹಾಕಿ ಹುರಿದುಕೊಳ್ಳಿ. ಅದೇ ತುಪ್ಪಕ್ಕೆ ಸಕ್ಕರೆ ನೀರು ಹಾಕಿ ಗಟ್ಟಿ ಪಾಕ ಮಾಡಿಟ್ಟುಕೊಳ್ಳಿ. ಗೋಧಿ ಹಾಲಿನ ಮೇಲೆ ತೇಲುತ್ತಿರುವ ನೀರನ್ನು ಬಗ್ಗಿಸಿ. ತಳದಲ್ಲಿ ಉಳಿದ ಹಾಲನ್ನು ಚಮಚದಿಂದ ಕಲಕಿ ಸಕ್ಕರೆ ಪಾಕಕ್ಕೆ ಸುರಿಯಿರಿ. ಅದು ಗಂಟಾಗದಂತೆ ಚಮಚದಿಂದ ಕಲಕುತ್ತಿರಬೇಕು. ಗೋಧಿ ಹಾಲು ಪಾಕದಲ್ಲಿ ಕುದಿದು ಗಟ್ಟಿಯಾದ ನಂತರ ಅದಕ್ಕೆ ನಿಂಬೆ ರಸ, ಕೇಸರಿ ಬಣ್ಣ, ತುಪ್ಪದಲ್ಲಿ ಕರಿದ ದ್ರಾಕ್ಷಿ, ಗೋಡಂಬಿ, ಹಾಕಿ ಕಲಸಿ. ಮತ್ತೆ 4 ನಿಮಿಷ ಬೇಯಿಸಿ. ಹಲ್ವಾ ಪಾತ್ರೆಗೆ ಅಂಟಿಕೊಳ್ಳದೆ ಬೆಂದು ತುಪ್ಪ ಬಿಟ್ಟುಕೊಡಾಗ ಅದನ್ನು ತಟ್ಟೆಗೆ ಸುರುವಿ ತೆಳ್ಳಗೆ ಮಾಡಿ ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಿ.