ಬೇಕಾಗುವ ಸಾಮಗ್ರಿ: ಒಂದು ಕಪ್ ಗೋಧಿ ಹಿಟ್ಟು, ಕಾಲು ಕಪ್ ರವೆ, ಸ್ವಲ್ಪ ಉಪ್ಪು, ಕರಿಯಲು ಎಣ್ಣೆ, ಸ್ವಲ್ಪ ಗೋಡಂಬಿ, ಕರ್ಬೂಜ ಹಣ್ಣಿನ ಬೀಜ, ಏಲಕ್ಕಿ.
ಮಾಡುವ ವಿಧಾನ: ಗೋಡಂಬಿ ಹಾಗೂ ಕರ್ಬೂಜ ಹಣ್ಣಿನ ಬೀಜಗಳನ್ನು ಒಂದು ಗಂಟೆ ಬಿಸಿಲಿನಲ್ಲಿ ಒಣಗಿಸಿ ಪ್ರತ್ಯೇಕವಾಗಿ ಪುಡಿ ಮಾಡಿ, ಸಕ್ಕರೆ ಹಾಗೂ ಏಲಕ್ಕಿ ಪುಡಿಗಳೊಂದಿಗೆ ಬೆರೆಸಿಡಿ. ಪ್ರತ್ಯೇಕವಾಗಿ ಗೋಧಿ ಹಿಟ್ಟಿಗೆ ಒಂದು ಚಿಟಿಕೆ ಉಪ್ಪು, ನೀರು ಸೇರಿಸಿ ಮೃದುವಾಗಿ ನಾದಿ ಮುದ್ದೆ ತಯಾರಿಸಿಡಿ. ಒಂದು ಚಮಚ ಅಕ್ಕಿ ಹುಡಿ ಹಾಗೂ 3 ಚಮಚ ತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಡಿ. ನಂತರ ಗೋಧಿ ಹಿಟ್ಟಿನಿಂದ ತೆಳುವಾದ ಚಪಾತಿಗಳನ್ನು ತಯಾರಿಸಿಡಿ. ಚಪಾತಿಗಳ ನಡುವೆ ಸ್ವಲ್ಪ ಅಕ್ಕಿ ಹಾಗೂ ತುಪ್ಪದ ಪೇಸ್ಟನ್ನು ಸವರಿ 3 ಚಪಾತಿಗಳನ್ನು ಒಂದರ ಮೇಲೊಂದರಂತೆ ಇಡಿ. ಇದನ್ನು ಚಾಪೆಯಂತೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸುರುಳಿಸಿ ನಂತರ ಅರ್ಧ ತುಂಡು ಮಾಡಿ. ನಂತರ ಪ್ರತಿ ತುಂಡಿನೊಳಗೆ ಕರ್ಬೂಜ ಮಿಶ್ರಣ ತುಂಬಿ. ಅಂಚುಗಳನ್ನು ಅಂಟಿಸಿರಿ. ಸಣ್ಣ ಉರಿಯಲ್ಲಿ ಚೆನ್ನಾಗಿ ಕರಿಯಿರಿ.