ಬೇಕಾಗುವ ಸಾಮಗ್ರಿ- ಒಂದು ಕಪ್ ಗೋಡಂಬಿ, ಒಂದುವರೆ ಕಪ್ ಸಕ್ಕರೆ, ಏಲಕ್ಕಿ ಪುಡಿ, ನಾಲ್ಕು ಚಮಚ ತುಪ್ಪ.
ಮಾಡುವ ವಿಧಾನ- ಗೋಡಂಬಿಯನ್ನು ಹಾಲಿನಲ್ಲಿ ಎರಡರಿಂದ ಮೂರು ಗಂಟೆ ಕಾಲ ನೆನೆಹಾಕಿ ನಂತರ ರುಬ್ಬಿ. ನಾನ್‌ಸ್ಟಿಕ್ ಪಾನ್‌ನಲ್ಲಿ ತುಪ್ಪ ಬಿಸಿಮಾಡಿ ರುಬ್ಬಿದ ಈ ಮಿಶ್ರಣವನ್ನು ಸೇರಿಸಿ. ಏಲಕ್ಕಿ ಪುಡಿಯನ್ನೂ ಸೇರಿಸಿ. ಸ್ವಲ್ಪ ಗಟ್ಟಿಯಾಗುವವರೆಗೆ ತಿರುವುತ್ತಾ ಇದ್ದು, ನಂತರ ಕೆಳಗಿಳಿಸಿ. ತುಪ್ಪ ಸವರಿದ ಬಟ್ಟಲಿಗೆ ಈ ಮಿಶ್ರಣವನ್ನು ಸುರುವಿ. ನಂತರ ಬೇಕಾದ ಆಕಾರಕ್ಕೆ ಕತ್ತರಿಸಿ. ಗೋಡಂಬಿ ಬರ್ಫಿ ಸಿದ್ಧ.