Article Sweets Recipes In Kannada %e0%b2%97%e0%b3%8b%e0%b2%a1%e0%b2%82%e0%b2%ac%e0%b2%bf %e0%b2%ac%e0%b2%b0%e0%b3%8d%e0%b2%ab%e0%b2%bf 109061700105_1.htm

Select Your Language

Notifications

webdunia
webdunia
webdunia
webdunia

ಗೋಡಂಬಿ ಬರ್ಫಿ

ಗೋಡಂಬಿ ಬರ್ಫಿ
ಬೇಕಾಗುವ ಸಾಮಾಗ್ರಿಗಳು: ಅರ್ಧ ಕೆಜಿ ಸಕ್ಕರೆ, ಕಾಲು ಕೆಜಿ ಗೋಡಂಬಿ, 1 ಚಮಚ ಏಲಕ್ಕಿ ಪುಡಿ, 50 ಗ್ರಾಂ ತುಪ್ಪ, ಅರ್ಧ ತೆಂಗಿನಕಾಯಿ, 1 ಕಪ್ ಹಾಲು.

ಮಾಡುವ ವಿಧಾನ: ತೆಂಗಿನಕಾಯಿ ಮತ್ತು ಗೋಡಂಬಿಯನ್ನು 1 ಚಮಚ ತುಪ್ಪದಲ್ಲಿ ಬೇರೆಬೇರೆಯಾಗಿ ಹುರಿಯಿರಿ. ಹುರಿದ ಗೋಡಂಬಿ ಮತ್ತು ತೆಂಗಿನಕಾಯಿಗೆ ಹಾಲು ಸೇರಿಸಿ ರುಬ್ಬಿಕೊಳ್ಳಿ. ಒಲೆಯ ಮೇಲೆ ಪಾತ್ರೆ ಇಟ್ಟು ರುಬ್ಬಿದ ತೆಂಗಿನಕಾಯಿ ಮತ್ತು ಗೋಡಂಬಿಯನ್ನು ಹಾಕಿ ಅದಕ್ಕೆ ಸಕ್ಕರೆ ಬೆರೆಸಿ. ಸಕ್ಕರೆ ಕರಗುತ್ತಾ ಮಿಶ್ರಣಕ್ಕೆ ಹೊಂದಿಕೊಳ್ಳುತ್ತದೆ. ನಂತರ ಇದಕ್ಕೆ ತುಪ್ಪ ಮತ್ತು ಏಲಕ್ಕಿ ಸೇರಿಸಿ. ಒಂದು ದೊಡ್ಡ ತಟ್ಟೆಗೆ ತುಪ್ಪವನ್ನು ಸವರಿ, ಮಿಶ್ರಣವನ್ನು ಇದರ ಮೇಲೆ ಸುರಿಯಿರಿ ಮತ್ತು ತುಸು ತಟ್ಟಿರಿ. ಸ್ವಲ್ಪ ತಣಿದ ನಂತರ ಬೇಕಾದ ಆಕಾರಕ್ಕೆ ಕತ್ತರಿಸಿ.

Share this Story:

Follow Webdunia kannada