Article Sweets Recipes In Kannada %e0%b2%97%e0%b3%8b%e0%b2%a1%e0%b2%82%e0%b2%ac%e0%b2%bf %e0%b2%95%e0%b3%87%e0%b2%95%e0%b3%8d 110012000064_1.htm

Select Your Language

Notifications

webdunia
webdunia
webdunia
webdunia

ಗೋಡಂಬಿ ಕೇಕ್

ಗೋಡಂಬಿ ಕೇಕ್
ಬೇಕಾಗುವ ಸಾಮಾಗ್ರಿ: 50 ಗ್ರಾಂ ಗೋಡಂಬಿ, ಎರಡು ಲೀಟರ್ ಹಾಲು, 250 ಗ್ರಾಂ ಸಕ್ಕರೆ, 50 ಗ್ರಾಂ ತುಪ್ಪ, 1 ಚಮಚ ರೋಸ್ ಎಸೆನ್ಸ್.

ಮಾಡುವ ವಿಧಾನ: ಹಾಲು ಹಾಗೂ ಸಕ್ಕರೆಯನ್ನು ಒಂದು ಪಾತ್ರೆಯಲ್ಲಿ ಹಾಕಿ ಒಲೆ ಮೇಲಿಡಿ. ಇದು ಗಟ್ಟಿಯಾಗಲು ತೊಡಗಿದಾಗ ಗೋಡಂಬಿಯ್ನನು ಹಾಕಿ. ಇದು ತುಂಬ ಗಟ್ಟಿಯಾಗುವವರೆಗೂ ಹಾಗೇ ಬಿಡಿ. ಈ ಮಿಶ್ರಣ ಪೂರ್ತಿ ಗಟ್ಟಿಯಾದ ಮೇಲೆ ಸ್ವಲ್ಪ ಸ್ವಲ್ಪವೇ ತುಪ್ಪ ಸೇರಿಸುತ್ತಾ ಬನ್ನಿ. ತುಪ್ಪ ಎಲ್ಲವೂ ಮಿಶ್ರಣವಾದ ಮೇಲೆ ರೋಸ್ ಎಸೆನ್ಸ್ ಹಾಕಿ. ಒಲೆಯಿಂದ ಕೆಳಗಿಳಿಸಿ. ತುಪ್ಪ ಸವರಿದ ತಟ್ಟೆಯಲ್ಲಿ ಹರಡಿ. ಬೇಕಾದ ಆಖಾರಕ್ಕೆ ಕತ್ತರಿಸಿ. ತಣ್ಣಗಾದ ಮೇಲೆ ತಿನ್ನಿ. ಇದು ಒಂದು ವಾರಕ್ಕೆ ಉಳಿಯುತ್ತದೆ.

Share this Story:

Follow Webdunia kannada