ಗೆಣಸನ್ನು ಚನ್ನಾಗಿ ಬೇಯಿಸಿ ನಂತರ ಅದರ ಸಿಪ್ಪೆಯನ್ನು ತೆಗೆಯಿರಿ ಖವಾವನ್ನು ಚನ್ನಾಗಿ ನಾದಿಕೊಳ್ಳಿ, ನಂತರ ಗೆಣಸಿಗೆ ಖವಾ, ಮೈದಾ ಸೇರಿಸಿ ಮಿಶ್ರಣ ಮಾಡಿ ಚನ್ನಾಗಿ ನಾದಿ ಉಂಡೆ ಮಾಡಿಕೊಳ್ಳಿ. ಸಮ ಪ್ರಮಾಣದಲ್ಲಿ ಡಾಲ್ಡಾವನ್ನು ಬಾಣಲೆಯಲ್ಲಿ ಹಾಕಿ, ಎಣ್ಣೆ ಚನ್ನಾಗಿ ಕಾದ ನಂತರ ಗೆಣಸಿನ ಉಂಡೆಗಳನ್ನು ಕಂದು ಬಣ್ಣ ಬರುವವರೆಗೂ ಕರಿಯಿರಿ, ನಂತರ ಅವುಗಳನ್ನು ಸಕ್ಕರೆ ಪಾಕಕ್ಕೆ ಹಾಕಿ, ಅದಕ್ಕೆ ಸ್ವಲ್ಪ ಏಲಕ್ಕಿ ಪುಡಿ ಸೇರಿಸಬಹುದು.