ಬೇಕಾಗುವ ಸಾಮಾಗ್ರಿಗಳು:
ಗೆಣಸು - 1/4 ಕೆ.ಜಿ
ಖೋವಾ - 1/4 ಕೆ.ಜಿ
ಸಕ್ಕರೆ - 1/4 ಕೆ.ಜಿ
ಡಾಲ್ಡಾ - 1/4 ಕೆ.ಜಿ,
ಏಲಕ್ಕಿ - ಸ್ವಲ್ಪ
ಕೇಸರಿ - ಸ್ವಲ್ಪ
ಮೈದಾ - 200 ಗ್ರಾಂ .
ಪಾಕ ವಿಧಾನ:
ಮೊದಲಿಗೆ ಗೆಣಸನ್ನು ಚೆನ್ನಾಗಿ ಬೇಯಿಸಿ ಅದರ ಸಿಪ್ಪೆಯನ್ನು ತೆಗೆಯಿರಿ. ಖೋವಾವನ್ನು ಚೆನ್ನಾಗಿ ನಾದಿಕೊಳ್ಳಿ, ನಂತರ ಗೆಣಸಿಗೆ ಖೋವಾ, ಮೈದಾ ಸೇರಿಸಿ ಮಿಶ್ರಣ ಮಾಡಿ ಚೆನ್ನಾಗಿ ನಾದಿ ಉಂಡೆ ಮಾಡಿಕೊಳ್ಳಿ.
ಸಮ ಪ್ರಮಾಣದಲ್ಲಿ ಡಾಲ್ಡಾವನ್ನು ಬಾಣಲೆಯಲ್ಲಿ ಹಾಕಿ, ಎಣ್ಣೆ ಚೆನ್ನಾಗಿ ಕಾದ ನಂತರ ಗೆಣಸಿನ ಉಂಡೆಗಳನ್ನು ಕಂದು ಬಣ್ಣ ಬರುವವರೆಗೂ ಕರಿಯಿರಿ, ನಂತರ ಅವುಗಳನ್ನು ಸಕ್ಕರೆ ಪಾಕಕ್ಕೆ ಹಾಕಿ, ಅದಕ್ಕೆ ಸ್ವಲ್ಪ ಏಲಕ್ಕಿ ಪುಡಿ ಸೇರಿಸಬಹುದು.