Article Sweets Recipes In Kannada %e0%b2%97%e0%b3%81%e0%b2%b2%e0%b3%8d%e0%b2%95%e0%b2%82%e0%b2%a1%e0%b3%8d %e0%b2%aa%e0%b3%87%e0%b2%a1%e0%b2%be 109102300080_1.htm

Select Your Language

Notifications

webdunia
webdunia
webdunia
webdunia

ಗುಲ್ಕಂಡ್ ಪೇಡಾ

ಗುಲ್ಕಂಡ್ ಪೇಡಾ
ಬೇಕಾಗುವ ಸಾಮಗ್ರಿ: ಅರ್ಧ ಕೆಜಿ ಖೋವಾ, ಎರಡು ಕಪ್ ಸಕ್ಕರೆ, ಅರ್ಧ ಚಮಚ ಏಲಕ್ಕಿ ಪುಡಿ, ಒಂದು ಚಮಚ ಪಿಸ್ತಾ, ಎರಡು ಚಮಚ ಗುಲ್ಡಂಡ್, ಆರೇಳು ಬಾದಾಮಿ.

ಮಾಡುವ ವಿಧಾನ: ಹದವಾದ ಉರಿಯಲ್ಲಿ ದಪ್ಪತಳದ ಪಾತ್ರೆಯನ್ನುಟ್ಟು ಅದ್ಕಕೆ ಗುಲ್ಕಂಡ್ ಹಾಕಿ. ಅದನ್ನು ತಿರುವುತ್ತಾ ಸ್ವಲ್ಪ ದಪ್ಪವಾಗುವವರೆಗೆ ಹಾಗೇ ಬಿಡಿ. ಒಲೆಯಿಂದ ಕೆಳಗಿಳಿಸಿ ತಣ್ಣಗಾಗಲು ಬಿಡಿ. ಖೋಯಾ ತುರಿದು ಅದಕ್ಕೆ ನುಣ್ಣಗೆ ಪುಡಿ ಮಾಡಿದ ಸಕ್ಕರೆ ಸೇರಿಸಿ. ನಾನ್‌ಸ್ಟಿಕ್ ಪಾನ್‌ನಲ್ಲಿ ಸಕ್ಕರೆ ಹಾಗೂ ಖೋಯಾ ಮಿಶ್ರಣ ಹಾಕಿ ದೊಡ್ಡ ಉರಿಯಲ್ಲಿ ಕಾಯಿಸಿ. ಕೆಲವು ನಿಮಿಷಗಳ ನಂತರ ಉರಿಯನ್ನು ಕಡಿಮೆ ಮಾಡಿ. ನಂತರ ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಮಿಶ್ರಣದ ಸ್ವಲ್ಪ ಭಾಗವನ್ನು ಅಂಗೈಯಲ್ಲಿ ತೆಗೆದು ಅದನ್ನು ಚಪ್ಪಟೆ ಮಾಡಿ. ತಣಿಯಲು ಇಟ್ಟ ಗುಲ್ಕಂಡನ್ನು ಚಪ್ಪಟೆಯಾದ ಮಿಶ್ರಣದ ಮೇಲೆ ಮಧ್ಯದಲ್ಲಿಟ್ಟು ರೋಲ್ ಮಾಡಿ. ಆ ರೋಲನ್ನು ಮೆತ್ತಗೆ ಒತ್ತಿ ಬಿಸ್ಕೆಟಿನ ಆಕಾರಕ್ಕೆ ತನ್ನಿ. ಇದೇ ತರಹ ಉಳಿದ ಮಿಶ್ರಣಗಳನ್ನೂ ಮಾಡಿ. ಇದನ್ನು ಬಾದಾಮಿ, ಪಿಸ್ತಾಗಳಿಂದ ಅಲಂಕಾರ ಮಾಡಿ ತಮ್ಣಗಾಗಲು ಬಿಡಿ. ಈಗ ಗುಲ್ಕಂಡ್ ಪೇಡಾ ರೆಡಿ.

Share this Story:

Follow Webdunia kannada