ಬೇಕಾಗುವ ಸಾಮಗ್ರಿ- ಗಸಗಸೆ 50 ಗ್ರಾಂ, ತೆಂಗಿನ ತುರಿ ಒಂದು ಕಪ್, ಅಕ್ಕಿ ನಾಲ್ಕು ಟೀ ಚಮಚ, ಸಕ್ಕರೆ ಅರ್ಧ ಕಪ್, ತುಪ್ಪ 6 ಟೀ ಚಮಚ, ಏಲಕ್ಕಿ ಪುಡಿ 1 ಚಮಚ, ಹುರಿದ ಗೋಡಂಬಿ, ದ್ರಾಕ್ಷಿ, ಉಪ್ಪು.
ಮಾಡುವ ವಿಧಾನ- ಗಸೆಗಸೆ ಪರಿಮಳ ಬರುವವರೆಗೂ ಹುರಿದು ಅಕ್ಕಿ, ತೆಂಗಿನ ತುರಿ ಹಾಕಿ ನುಣ್ಣಗೆ ಗಟ್ಟಿಯಾಗಿ ರುಬ್ಬಿ. ದಪ್ಪ ತಳದ ಪಾತ್ರೆಯಲ್ಲಿ ಕಾಯಲು ಇಡಿ. ಅದಕ್ಕೆ ತುಪ್ಪ ಹಾಕಿ ಬಿಸಿಯಾದೊಡನೆ ರುಬ್ಬಿರುವ ಮಿಶ್ರಣ ಹಾಕಿ ಸಣ್ಣ ಉರಿಯಲ್ಲಿ ಕಲಕುತ್ತಿರಿ. ಸ್ವಲ್ಪ ಮಗುಚಿ. ಈ ಮಿಶ್ರಣ ಪಾತ್ರೆಯಿಂದ ಬಿಡುತ್ತಾ ಬರುವಾಗ ಚಿಟಿಕೆ ಉಪ್ಪು ಹಾಕಿ ಮತ್ತೆ ಮಗುಚಿ ಇಳಿಸಬೇಕು. ಏಲಕ್ಕಿ, ಗೋಡಂಬಿ, ದ್ರಾಕ್ಷಿಯಿಂದ ಅಲಂಕರಿಸಿ ಗಸಗಸೆ ಹಲ್ವ ರೆಡಿ.