Article Sweets Recipes In Kannada %e0%b2%96%e0%b2%b0%e0%b3%8d%e0%b2%9c%e0%b3%82%e0%b2%b0 %e0%b2%ae%e0%b2%bf%e0%b2%a0%e0%b2%be%e0%b2%af%e0%b2%bf 109101600064_1.htm

Select Your Language

Notifications

webdunia
webdunia
webdunia
webdunia

ಖರ್ಜೂರ ಮಿಠಾಯಿ

ಖರ್ಜೂರ ಮಿಠಾಯಿ
ಬೇಕಾಗುವ ಸಾಮಗ್ರಿ: 12 ಹಸಿ ಖರ್ಜೂರ, ಅರ್ಧ ಕಪ್ ಖೋವಾ, ಒಂದು ಚಮಚ ತುಪ್ಪ, ಕಾಲು ಕಪ್ ಪುಡಿ ಮಾಡಿದ ಸಕ್ಕರೆ, ಒಂದು ಚಮಚ ಕೊಬ್ಬರಿ ತುರಿ, ದ್ರಾಕ್ಷಿ, ಗೋಡಂಬಿ, ಪಿಸ್ತಾ.
ಮಾಡುವ ವಿಧಾನ: ಖರ್ಜೂರವನ್ನು ತುಂಡು ಮಾಡದೆ ಒಳಗಿನ ಬೀಜವನ್ನು ತೆಗೆಯಿರಿ. ಖೋವಾವನ್ನು ಬೆರಳುಗಳಿಂದ ಪುಡಿ ಮಾಡಿ. ದ್ರಾಕ್ಷಿ, ಗೋಡಂಬಿ, ಪಿಸ್ತಾ, ಕೊಬ್ಬರಿ ತುರಿ, ಸಕ್ಕರೆ ಬೆರೆಸಿ. ಬೀಜ ತೆಗೆದ ಖರ್ಜೂರದಲ್ಲಿ ಈ ಮಿಶ್ರಣ ತುಂಬಿ. ತುಪ್ಪ ಬಿಸಿ ಮಾಡಿ ಸಣ್ಣ ಉರಿಯಲ್ಲಿ ಈ ಮಿಶ್ರಣ ತುಂಬಿದ ಖರ್ಜೂರವನ್ನು ಹಾಕಿ ಒಂದು ನಿಮಿಷ ಮಗುಚಿ ಹೊರತೆಗೆಯಿರಿ. ಖರ್ಜೂರದ ರುಚಿರುಚಿಯಾದ ಗರಿಗರಿ ಮಿಠಾಯಿ ಸಿದ್ಧ.

Share this Story:

Follow Webdunia kannada