Article Sweets Recipes In Kannada %e0%b2%96%e0%b2%9f%e0%b3%8d%e0%b2%9f%e0%b2%be%e0%b2%ae%e0%b3%80%e0%b2%9f%e0%b2%be %e0%b2%95%e0%b2%a1%e0%b3%82 110021800068_1.htm

Select Your Language

Notifications

webdunia
webdunia
webdunia
webdunia

ಖಟ್ಟಾಮೀಟಾ ಕಡೂ

ಅಡುಗೆ
ಬೇಕಾಗುವ ಸಾಮಗ್ರಿ- ಹಳದಿ ಕುಂಬಳಕಾಯಿ 400 ಗ್ರಾಂ, ಹಿಂಗು ಸ್ವಲ್ಪ, ಮೆಂತೆ ಅಱ್ಧ ಟೀ ಚಮಚ, ಹಸಿ ಮೆಣಸಿನ ಕಾಯಿ 2, ಕೊತ್ತಂಬರಿ ಬೀಜದ ಪುಡಿ ಎರಡು ಚಮಚ, ಅರ್ಧ ಚಮಚ ಅರಿಶಿನ ಪುಡಿ, ಕಾಲು ಚಮಚ ಗರಂಮಸಾಲ ಪುಡಿ, ಒಂದು ಚಮಚ ಮೆಣಸಿನ ಪುಡಿ, ಸಕ್ಕರೆ 2 ಚಮಚ, ಲಿಂಬೆರಸ ಎರಡು ಚಮಚ, ಎಣ್ಣೆ ನಾಲ್ಕು ಚಮಚ, ಕೊತ್ತಂಬರಿ ಸೊಪ್ಪು, ರುಚಿಗೆ ಉಪ್ಪು.
ಮಾಡುವ ವಿಧಾನ- ಕಾದ ಎಣ್ಣೆಯಲ್ಲಿ ಇಂಗು, ಮೆಂತೆ, ಸಕ್ಕರೆ ಬೆರೆಸಿ. ಸಕ್ಕರೆ ಕಂದು ಬಣ್ಣಕ್ಕೆ ತಿರುಗಿದ ನಂತರ ಹಸಿ ಮೆಣಸಿನಕಾಯಿಯನ್ನು ಹಾಕಿ ಒಂದು ನಿಮಿಷ ಹುರಿಯಿರಿ. ಹೆಚ್ಚಿದ ಕುಂಬಳ ಕಾಯಿಯನ್ನು ಬೆರೆಸಿ ಕೈಯಾಡಿಸಿ. ಉಪ್ಪು, ಅರಿಶಿನ ಪುಡಿ, ಕೊತ್ತಂಬರಿ ಪುಡಿ, ಗರಂಮಸಾಲಾ ಪುಡಿ, ಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಕಲಸಿ. ಪಾತ್ರೆ ಮುಚ್ಚಿ ಸಣ್ಣ ಉರಿಯಲ್ಲಿ 15 ನಿಮಿಷ ಬೇಯಿಸಿ. ಲಿಂಬೇರಸವನ್ನು ಬೇಯುತ್ತಿರುವ ತರಕಾರಿಗೆ ಬೆರೆಸಿ ಪುನಃ ಪಾತ್ರೆ ಮುಚ್ಚಿ ಐದು ನಿಮಿಷ ಬೆಯಿಸಿ. ಬೆಂದ ಮೇಲೆ ಕೊತ್ತಂಬರಿ ಸೊಪ್ಪೆ ಸೇರಿಸಿ.

Share this Story:

Follow Webdunia kannada