ಬೇಕಾಗುವ ಸಾಮಗ್ರಿ- ಅರ್ಧ ಕೆಜಿ ಕ್ಯಾರೆಟ್, ಒಂದು ಕೆಜಿ ಸಕ್ಕರೆ, ಸ್ವಲ್ಪ ಏಲಕ್ಕಿ ಪುಡಿ, ಎರಡು ಕಪ್ ಕೊಬ್ಬರಿ ತುರಿ, ಏಳೆಂಟು ಚಮಚ ತುಪ್ಪ, ಸ್ವಲ್ಪ ಗೊಡಂಬಿ.
ಮಾಡುವ ವಿಧಾನ- ಸಕ್ಕರೆ, ಕೊಬ್ಬರಿ ತುರಿ, ಕ್ಯಾರೆಟ್, ಕಾಲು ಲೋಟ ಹಾಲು ಹಾಕಿ ಮಿಕ್ಸಿಯಲ್ಲಿ ತಿರುಗಿಸಿ. ನಂತರ ಬಾಣಲೆಯಲ್ಲಿ ಸಣ್ಣ ಉರಿಯಲ್ಲಿ ಇಟ್ಟು ಕೈ ಬಿಡದೆ ಕಲುಕುತ್ತಿರಬೇಕು. ತುಪ್ಪವನ್ನು 24 ಚಮಚ ಪಾಕದೊಳಗೆ ಹಾಕಬೇಕು. ಪಾಕ ಬರುವ ವೇಳೆಗೆ ಏಲಕ್ಕಿ ಪುಡಿ ಹಾಕಿ ನಂತರ ತುಪ್ಪವನ್ನು ಸವರಿದ ತಟ್ಟೆಯಲ್ಲಿ ಪಾಕವನ್ನು ಸುರಿದು ಬಿಸಿ ಆರುವ ಮೊದಲೇ ಚಾಕುವಿನಿಂದ ಕತ್ತರಿಸಬೇಕು. ಗೋಡಂಬಿ ಇಟ್ಟು ಅಲಂಕರಿಸಿದರೆ ಕ್ಯಾರೆಟ್ ಮೀಠಾ ರೆಡಿ.