ಕ್ಯಾರೆಟ್ ಪಾಯಸ
ಬೇಕಾಗುವ ಸಾಮಗ್ರಿ: ಕ್ಯಾರೆಟ್, ಸಕ್ಕರೆ, ತುಪ್ಪ, ಏಲಕ್ಕಿ, ಗೋಡಂಬಿ.
ಮಾಡುವ ವಿಧಾನ: ಕ್ಯಾರೆಟ್ ತುರಿಯಿರಿ. ಪಾತ್ರಿಯನ್ನು ಬಿಸಿಮಾಡಿ ಅದಕ್ಕೆ ಕ್ಯಾರೆಟ್ ಹಾಗೂ ಸಕ್ಕರೆ ಹಾಕಿ ತಿರುವಿ. ನಂತರ ಸ್ವಲ್ಪ ತುಪ್ಪ ಹಾಕಿ ತಿರುವಿ. ನಂತರ ನೀರು ಸೇರಿಸಿ. ಹಾಲು ಹಾಗೂ ಏಲಕ್ಕಿ ಪುಡಿಯನ್ನೂ ಸೇರಿಸಿ. ಗೋಡಂಬಿಯನ್ನು ತುಪ್ಪದಲ್ಲಿ ಹುರಿದು ಸೇರಿಸಿ ಕುದಿಸಿ. ಕ್ಯಾರೆಟ್ ಪಾಯಸ ರೆಡಿ.