Article Sweets Recipes In Kannada %e0%b2%95%e0%b3%8d%e0%b2%af%e0%b2%be%e0%b2%ac%e0%b3%87%e0%b2%9c%e0%b3%8d %e0%b2%aa%e0%b2%be%e0%b2%af%e0%b2%b8 109100300077_1.htm

Select Your Language

Notifications

webdunia
webdunia
webdunia
webdunia

ಕ್ಯಾಬೇಜ್ ಪಾಯಸ

ಕ್ಯಾಬೇಜ್ ಪಾಯಸ
ಬೇಕಾಗುವ ಸಾಮಗ್ರಿ- ಒಂದು ಕಪ್ ಹೆಚ್ಚಿದ ಕ್ಯಾಬೇಜ್, ಏಳು ಕಪ್ ಹಾಲು, ಒಂದು ಕಪ್ ಸಕ್ಕರೆ, ಸ್ವಲ್ಪ ಗೋಡಂಬಿ, ಚಿಟಿಕೆಯಷ್ಟು ಏಲಕ್ಕಿ ಪುಡಿ, ಸ್ವಲ್ಪ ತುಪ್ಪ.

ಮಾಡುವ ವಿಧಾನ- ಚೆನ್ನಾಗಿ ತುರಿದ ಕ್ಯಾಬೇಜನ್ನು ಅದರ ವಾಸನೆ ಹೋಗುವ ತನಕ ಸ್ವಲ್ಪ ತುಪ್ಪದಲ್ಲಿ ಹುರಿಯಿರಿ. ಅದಕ್ಕೆ ನಂತರ ಸ್ವಲ್ಪ ನೀರು ಹಾಕಿ. ಮೆತ್ತಗಾಗುವವರೆಗೆ ಬೇಯಿಸಿ. ತಣ್ಣಗಾಗಲು ಬಿಟ್ಟು ನಂತರ ಗೋಡಂಬಿ ಸೇರಿಸಿ ಚೆನ್ನಾಗಿ ರುಬ್ಬಿ. ನಂತರ ಬೇರೆಯೇ ಪಾತ್ರೆಯಲ್ಲಿ ಹಾಲು ಬಿಸಿ ಮಾಡಿ. ಹಾಲು ಕುದಿಯಲು ಶುರುವಾಗುವಾಗ ಕ್ಯಾಬೇಜ್ ಹಾಗೂ ಗೋಡಂಬಿಯ ಪೇಸ್ಟನ್ನು ಅದಕ್ಕೆ ಸೇರಿಸಿ. ತಿರುವುತ್ತಲೇ ಇರಿ. 15 ನಿಮಿಷ ಕುದಿಯಲು ಬಿಡಿ. ನಂತರ ಸಕ್ಕರೆ, ಏಲಕ್ಕಿ ಪುಡಿ ಸೇರಿಸಿ. ಸ್ವಲ್ಪ ಹೊತ್ತು ಸಣ್ಣ ಉರಿಯಲ್ಲಿಡಿ. ಕ್ಯಾಬೇಜ್ ಪಾಯಸ ರೆಡಿ. ಫ್ರಿಡ್ಜ್‌ನಲ್ಲಿಟ್ಟು ತಣ್ಣಗೆ ಸವಿದರೆ ಇನ್ನೂ ರುಚಿಯಾಗಿರುತ್ತದೆ.

Share this Story:

Follow Webdunia kannada