ಬೇಕಾಗುವ ಸಾಮಗ್ರಿ- ಒಂದು ಕಪ್ ಹೆಚ್ಚಿದ ಕ್ಯಾಬೇಜ್, ಏಳು ಕಪ್ ಹಾಲು, ಒಂದು ಕಪ್ ಸಕ್ಕರೆ, ಒಂದು ಮುಷ್ಟಿ ಗೋಡಂಬಿ, ಸ್ವಲ್ಪ ಏಲಕ್ಕಿ ಪುಡಿ, ಸ್ವಲ್ಪ ತುಪ್ಪ.
ಮಾಡುವ ವಿಧಾನ- ಹೆಚ್ಚಿದ ಕ್ಯಾಬೇಜನ್ನು ಅದರ ವಾಸನೆ ಹೋಗುವ ತನಕ ಸ್ವಲ್ಪ ತುಪ್ಪದಲ್ಲಿ ಹುರಿಯಿರಿ. ಅದಕ್ಕೆ ನಂತರ ಸ್ವಲ್ಪ ನೀರು ಹಾಕಿ. ಮೆತ್ತಗಾಗುವವರೆಗೆ ಬೇಯಿಸಿ. ತಣ್ಣಗಾಗಲು ಬಿಟ್ಟು ನಂತರ ಗೋಂಡಬಿ ಸೇರಿಸಿ ಚೆನ್ನಾಗಿ ರುಬ್ಬಿ. ನಂತರ ಬೇರೆಯೇ ಪಾತ್ರೆಯಲ್ಲಿ ಹಾಲು ಬಿಸಿ ಮಾಡಿ. ಹಾಲು ಕುದಿಯಲು ಶುರುವಾಗುವಾಗ ಕ್ಯಾಬೇಜ್ ಹಾಗೂ ಬೋಡಂಬಿಯ ಪೇಸ್ಟನ್ನು ಅದಕ್ಕೆ ಸೇರಿಸಿ. ತಿರುವುತ್ತಲೇ ಇರಿ. 15 ನಿಮಿಷ ಕುದಿಯಲು ಬಿಡಿ. ನಂತರ ಸಕ್ಕರೆ, ಏಲಕ್ಕಿ ಪುಡಿ ಸೇರಿಸಿ. ಸ್ವಲ್ಪ ಹೊತ್ತು ಸಣ್ಣ ಉರಿಯಲ್ಲಿಡಿ. ಕ್ಯಾಬೇಜ್ ಖೀರು ರೆಡಿ. ಫ್ರಿಡ್ಜ್‌ನಲ್ಲಿಟ್ಟು ತಣ್ಣಗೆ ಸವಿದರೆ ರುಚಿಯಾಗಿರುತ್ತದೆ.