ಬೇಕಾದ ಸಾಮಗ್ರಿಗಳು : ಕಿತ್ತಳೆ, ಸಕ್ಕರೆ, ಹಾಲು, ಏಲಕ್ಕಿ.
ಮಾಡುವ ವಿಧಾನ : ಕಿತ್ತಳೆ ಸಿಪ್ಪೆ ತೆಗೆದು ಮಿಕ್ಸಿಗೆ ಹಾಕಿ ಗಂಧದಂತೆ ರುಬ್ಬಿಕೊಳ್ಳಿ. ಅದಕ್ಕೆ ಕಾದ ಹಾಲು, ಸಕ್ಕರೆ ಹಾಕಿ ಚೆನ್ನಾಗಿ ಕಲಕಿರಿ. ಅನಂತರ ಏಲಕ್ಕಿ ಪುಡಿ ಹಾಕಿ ಕುಡಿಯಲು ಕೊಡಿ. ತುಂಬಾ ರುಚಿಯಾಗಿರುತ್ತದೆ. ಅಥವಾ ಇದನ್ನು ಫ್ರೀಜ್‌ನಲ್ಲಿಟ್ಟು ತಂಪಾದ ನಂತರ ಕುಡಿಯಬಹುದು.